Advertisement

ಬೆಂಗಳೂರು: ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ಬೆಂಗಳೂರು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಸ ವರ್ಷಾಚರಣೆ ವೇಳೆ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮುಳುಗಿ ತೇಲಾಡುವ ಮಂದಿಯನ್ನು ಸೇಫ್ಟಿಗೆ ಬೆಂಗಳೂರು ಪೊಲೀಸ್ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಯುವಕ, ಯುವತಿ ಸೇರಿದಂತೆ ಯಾರೇ ಕುಡಿದು ಟೈಟಾದರೂ ಅವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ.ಡಿ. 31ರ ರಾತ್ರಿ ಮಾತ್ರ ಈ ಸೇವೆ ಲಭ್ಯವಿರಲಿದೆ. ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಅವರು ಈ ಮೂಲಕ ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನ್ಯೂ ಇಯರ್ ಸಮಯದಲ್ಲಿ ಮದ್ಯಪ್ರಿಯರಿಗೆ ಸಮಸ್ಯೆಯಾಗದಂತೆ ನೀಡಿಕೊಳ್ಳಲು ಪೊಲೀಸರು ಬಂಪರ್ ಪ್ಲಾನ್ ಮಾಡಿಕೊಂಡಿದ್ದಾರೆ. ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಹೆಚ್​ಎಸ್​ಆರ್ ಲೇಔಟ್ ನಲ್ಲಿ ಸಂಪೂರ್ಣ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗ್ನೇಯ ವಿಭಾಗದಲ್ಲಿ 108 ಪಬ್, ರೆಸ್ಟೋರೆಂಟ್​ಗಳಿವೆ, ಪ್ರತಿಯೊಂದು ಪಬ್, ರೆಸ್ಟೋರೆಂಟ್ ಮುಂದೆಯೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಎಣ್ಣೆ ಹೊಡೆದು ಫುಲ್ ಟೈಟಾಗಿ ಪ್ರಜ್ಞೆ ತಪ್ಪಿ ಬೀಳುವವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿದ ಅಮಲಿನಲ್ಲಿ ಕುಣಿದು ಕುಪ್ಪಳಿಸಿ, ಗಾಯ ಮಾಡಿಕೊಂಡೋರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಅಥವಾ ಆಕಸ್ಮಿಕವಾಗಿ ಸೆಲೆಬ್ರೇಷನ್ ವೇಳೆ ಯಾರಿಗಾದ್ರು ಆರೋಗ್ಯ ತಪ್ಪಿದ್ರೆ ಪೊಲೀಸರಿಂದಲೇ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತೆ. ಕೂಡಲೇ ಆ್ಯಂಬುಲೆನ್ಸ್ ನಲ್ಲಿ ಬಿದ್ದ ಕುಡುಕರನ್ನ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಗುತ್ತೆ. ಪ್ರತಿಯೊಬ್ಬರ ಮೇಲೂ ಪೊಲೀಸರ ಹದ್ದಿನ ಕಣ್ಣು
ಈಗಾಗಲೇ ಆಗ್ನೇಯ ವಿಭಾಗದ ಡಿಸಿಪಿ ಖಾಸಗಿ ಆಸ್ಪತ್ರೆ ಜೊತೆ ಈ ಬಗ್ಗೆ ಮಾತನಾಡಿಕೊಂಡಿದ್ದಾರೆ. ಆರೋಗ್ಯ ಇಲಾಖೆಗೂ ಆ್ಯಂಬುಲೆನ್ಸ್​ಗಳಿಗಾಗಿ ಪತ್ರ ಬರೆಯಲಾಗಿದೆ. ಪಬ್, ರೆಸ್ಟೋರೆಂಟ್​ಗಳಿಗೆ ಎಂಟ್ರಿಯಾಗೋ ಪ್ರತಿಯೊಬ್ಬರ ಮುಖನೂ ಸಿಸಿ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗುತ್ತೆ. ಎಂಟ್ರಿ ಬಾಗಿಲಲ್ಲೇ ಪೊಲೀಸರಿಗೆ ಮಾಸ್ಕ್ ತೆಗೆದು ಚಹರೆ ತೋರಿಸಬೇಕು. ಸೆಲೆಬ್ರೇಷನ್ ವೇಳೆ ಮತ್ತು ಸೆಲೆಬ್ರೇಷನ್ ನಂತರ ಕೆಲವು ಘಟನೆಗಳು ನಡೆಯೋ ಹಿನ್ನೆಲೆ ಕೆಲವರಿಂದ ಅಸಭ್ಯ ವರ್ತನೆ, ಕಳ್ಳತನ ಈ ರೀತಿಯ ಕೃತ್ಯ ನಡೆಯೋ ಸಾಧ್ಯತೆ ಇದೆ. ಈ ರೀತಿ ಕೃತ್ಯ ನಡೆಸಿ ತಪ್ಪಿಸಿಕೊಳ್ಳೋ ಪ್ಲಾನ್ ಇದ್ದವರ ಮೇಲೆ ಪೊಲೀಸರು ಕಣ್ಣಿಡಲಿದ್ದಾರೆ. ಎಂಟ್ರಿಯಾಗೋ ಪ್ರತಿಯೊಬ್ಬರ ಫೋಟೋ, ಡಿಟೈಲ್ಸ್ ಪೊಲೀಸರು ಪಡೆದುಕೊಳ್ಳಲಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ