ಕಲ್ಲುಗುಂಡಿ: ಪಾದಚಾರಿಗೆ ಸ್ಕೂಟರ್ ಡಿಕ್ಕಿ ಸಂಭವಿಸಿ ಮೃತಪಟ್ಟ ವ್ಯಕ್ತಿಯ ವಾರೀಸುದಾರರು ಇದ್ದಲ್ಲಿ ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಈ ಮೂಲಕ ಮನವಿ ಮಾಡಲಾಗಿದೆ. ಡಿಸೆಂಬರ್ 26 ರಂದು ಸ್ಕೂಟರ್ ಡಿಕ್ಕಿ ಸಂಭವಿಸಿ ಅಪರಿಚಿತರೊಬ್ಬರು ಮೃತಪಟ್ಟಿದ್ದಾರೆ. ಅವರ ಮೃತ ಶರೀರವನ್ನು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮೃತ ವ್ಯಕ್ತಿ ಕೆಲವು ತಿಂಗಳುಗಳಿಂದ ಕಲ್ಲುಗುಂಡಿ ಸಮೀಪದ ಪೇಟೆಯಲ್ಲಿ ಬಿಕ್ಷಾಟನೆ ಮಾಡಿ ಜೀವಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆ ವ್ಯಕ್ತಿ ಸುಮಾರು ಅಂದಾಜು 65 ವರ್ಷ ಪ್ರಾಯವಾಗಿದ್ದು ಅಪಘಾತದ ಸಂದರ್ಭ ಅವರ ತಲೆಗೆ ತೀವ್ರ ಗಾಯವಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ಅವರು ಮೃತಪಟ್ಟಿರುತ್ತಾರೆ. ಸ್ಕೂಟರ್ ಚಾಲಕ ಕಲ್ಲುಗುಂಡಿ ಕಡಪಾಲ ನಿವಾಸಿ ವಿಕ್ರಾಂತ್ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತ ವ್ಯಕ್ತಿಯ ವಾರಿಸುದಾರರು ಯಾರಾದರೂ ಇದ್ದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
