ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿದ್ದ ಪ್ರಯಾಣಿಕರಿಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಇದೀಗ ಈ ಇಬ್ಬರ ಕಿತ್ತಾಟದ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಇಬ್ಬರು ವ್ಯಕ್ತಿಗಳು ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು, ಈ ಇಬ್ಬರ ಜಗಳಕ್ಕೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟುಮಾಡಿದ್ದು, ನಂತರ ವಿಮಾನದ ಸಿಬ್ಬಂದಿಗಳು ಬಂದು ಇಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ .ಒಬ್ಬ ವ್ಯಕ್ತಿ ಶಾಂತಿ ಸೆ ಬಾತ್ ( ಶಾಂತವಾಗಿ ಮಾತನಾಡಿ) ಎಂದು ಹೇಳುವುದನ್ನು ಕೇಳಬಹುದು, ಆದರೆ ಇನ್ನೊಬ್ಬ ವ್ಯಕ್ತಿ ಹತ್ ನೀಚೆ ಕರ್ (ನಿಮ್ಮ ಕೈಯನ್ನು ಕೆಳಕ್ಕೆ ಇಳಿಸಿ) ಎಂದು ಹೇಳುತ್ತಾರೆ. ಕೆಲವೇ ಸಮಯದ ನಂತರ ಇಬ್ಬರ ನಡುವೆ ಮಾತು ಹೊಡೆದಾಟಕ್ಕೆ ತಿರುಗಿದೆ. ಒಬ್ಬರ ಮೇಲೆ ಒಬ್ಬರು ಕೈ ಮಾಡಿದ್ದಾರೆ. ಈ ವಿಡಿಯೊದಲ್ಲಿ ಸಂಘರ್ಷಕ್ಕೆ ನಿಂತ ವ್ಯಕ್ತಿ ತನ್ನ ಕನ್ನಡಕವನ್ನು ತೆಗೆದು ಇನ್ನೊಬ್ಬ ವ್ಯಕ್ತಿಗೆ ಹೊಡೆಯುತ್ತಾನೆ. ಕನ್ನಡಕ ಹಾಕಿದ್ದ ವ್ಯಕ್ತಿಯ ಸ್ನೇಹಿತರು ಅಲ್ಲಿಗೆ ಬರುತ್ತಾರೆ, ಅವರ ನಡುವೆ ಮಾತು ಜೋರು-ಜೋರಾಗಿ ಅವರು ಕೂಡ ಆ ವ್ಯಕ್ತಿಗೆ ಹೊಡೆಯಲು ಆರಂಭಿಸಿದ್ದಾರೆ. ಹಲ್ಲೆಗೆ ಒಳಾಗದ ವ್ಯಕ್ತಿ ದಾಳಿಯನ್ನು ತಪ್ಪಿಸಲು ಪ್ರಯತ್ನ ಮಾಡುತ್ತಾರೆ.

ಈ ಸಮಯದಲ್ಲಿ ವಿಮಾನ ಸಿಬ್ಬಂದಿಗಳು ಕೂಡ ಜಗಳವನ್ನು ತಡೆಯಲು ಮುಂದಾಗುತ್ತಾರೆ. ಆದರೆ ಈ ಕಿತ್ತಾಟ ಅವರ ಕೈಮೀರಿ ಹೋಗಿತ್ತು. ಈ ಜಗಳವನ್ನು ನಿಲ್ಲಿಸಲು ವಿಮಾನ ಸಿಬ್ಬಂದಿಗಳು ಪ್ರಯತ್ನ ಮಾಡುತ್ತಾರೆ. ಆದರೆ ಜಗಳ ವಿಪರಿತವಾಗಿದ್ದ ಕಾರಣ ಸಹ-ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಜಗಳವನ್ನು ನಿಲ್ಲಿಸುವಂತೆ ಇಬ್ಬರಿಗೂ ಹೇಳುತ್ತಾರೆ. ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಥಾಯ್ ಸ್ಮೈಲ್ ಏರ್‌ವೇಸ್ ಈ ಸಮಸ್ಯೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ