ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಡಗು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟ ಡಿಸೆಂಬರ್31 ರಂದು ಮಡಿಕೇರಿಯ ಜೆನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಕ್ರೀಡಾಕೂಟವನ್ನು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್ ಉದ್ಘಾಟಿಸಿದರು.

ಐದು ತಾಲೂಕುಗಳಿಂದ ಒಟ್ಟು 400 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಮದೆನಾಡು ಪಂಚಾಯತಿ, ದ್ವಿತೀಯ ನೆಲ್ಲಿಹುದುಕೇರಿ ಪಂಚಾಯಿತಿ, ಮಹಿಳೆಯರ ಕಬಡ್ಡಿಯಲ್ಲಿ ಪ್ರಥಮ ಮರಗೋಡು ಪಂಚಾಯಿತಿ, ದ್ವಿತೀಯ ಚೆಟ್ಟಳ್ಳಿ ಪಂಚಾಯಿತಿ, ಪುರುಷರ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ತೊರೆನೂರು ಪಂಚಾಯಿತಿ, ದ್ವಿತೀಯ ಚೆಟ್ಟಳ್ಳಿ ಪಂಚಾಯಿತಿ, ಹಾಗೂ ಮಹಿಳೆಯರ ಖೋ ಖೋ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ಪಂಚಾಯಿತಿ ಪ್ರಥಮ, ಮಡಿಕೇರಿ ದ್ವಿತೀಯ, ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಾಲ್ದಾರೆ ಪಂಚಾಯತಿ ಪ್ರಥಮ, ಹರದೂರು ಪಂಚಾಯಿತಿ ದ್ವಿತೀಯ. ಮಹಿಳೆಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಮರಗೋಡು ಪಂಚಾಯಿತಿ ಪ್ರಥಮ, ಮಡಿಕೇರಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು.

ಈ ಸಂದರ್ಭ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ ವಿಸ್ಮಯ, ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರಾದ ಕೃಷ್ಣ, ಹಾಕಿ ತರಬೇತುದಾರರಾದ ಬಿಂದಿಯ, ಅಥ್ಲೆಟಿಕ್ ತರಬೇತುದಾರರಾದ ಮಹಾಬಲ ಕೆ. ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಅಂತೋನಿ ಡಿಸೋಜಾ ನಿರೂಪಿಸಿದರು.
