ಸುಳ್ಯ: ಸುಳ್ಯ ತಾಲೂಕಿನ ಪ್ರತಿಷ್ಠಿತ ತಂಡವಾದ ಜಾನ್ ಜಿಗರ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಸುಳ್ಯ ಇದರ ಆಶ್ರಯದಲ್ಲಿ ಜನವರಿ 1-2023 ರಂದು ಪ್ರಥಮ ವರ್ಷದ ಆಹ್ವಾನಿತ 12 ತಂಡಗಳ ‘ಜಾನ್ ಜಿಗರ್ ಟ್ರೋಫಿ 2023’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಕ್ರೀಡಾ ಮೈದಾನದಲ್ಲಿ ನಡೆಯಿತು. ಜಾನ್ ಜಿಗರ್ ಟ್ರೋಫಿ ಯ ಫೈನಲ್ ಹಣಾಹಣಿಯಲ್ಲಿ ಬ್ರದರ್ಸ್ ಬಾಕಿಲ ವಿಜಯಶಾಲಿಯಾಗಿ ಪ್ರಥಮ ಸ್ಥಾನ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಫ್ರೆಂಡ್ಸ್ ಫಾರೆವರ್ ಪೈಚಾರ್ ಪಡೆದುಕೊಂಡಿತು. ವೈಯುಕ್ತಿಕ ಬೆಸ್ಟ್ ಬ್ಯಾಟ್ಸ್ ಮನ್ ಆರಿಫ್ ಬಾಕಿಲ, ಬೆಸ್ಟ್ ಬೌಲರ್ ಶಿಹಾಬ್ ಪೈಚಾರ್, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಸಾದಿಕ್ ಬಾಕಿಲ, ಬೆಸ್ಟ್ ಕೀಪರ್ ಶಮೀರ್ ಪೈಚಾರ್, ಮ್ಯಾನ್ ಆಫ್ ದಿ ಸೀರಿಸ್ ಲತೀಫ್ ಬಾಕಿಲ ಪಡೆದುಕೊಂಡರು. ಪಂದ್ಯಾಕೂಟದ ತೀರ್ಪುಗಾರರಾಗಿ ಮಜೀದ್, ಹಾಗೂ ಮೋಹನ ಕಾರ್ಯ ನಿರ್ವಹಿಸಿದರು.

ಇದೇ ಸಂಧರ್ಭದಲ್ಲಿ ಜಾನ್ ಜಿಗರ್ ತಂಡದ ಕಪ್ತಾನ ಯತೀಂದ್ರ, ಹಾಗೂ ಎಂಸಿಸಿ ಸದಸ್ಯ ಸಾದಿಕ್ ಹಳೆಗೇಟು ರವರ ಹುಟ್ಟು ಹಬ್ಬವನ್ನು ಪಂದ್ಯಾಕೂಟದ ನಡುವೆ ಕೇಕ್ ಕತ್ತರಿಸುವ ಮೂಲಕ ಇತರರ ಆಟಗಾರರೊಂದಿಗೆ ಆಚರಿಸಲಾಯಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಬಶೀರ್ ಕಾರ್ಲೆ (ಡೈರೆಕ್ಟರ್ HR ವೆಸ್ಟೊರ್ಮ್ ಗ್ರೂಪ್), ಎಸ್, ನಟರಾಜ (ದೈ.ಶಿಕ್ಷಕರು), ಮಹೇಶ್ ಮೇರ್ಕಜೆ (ಅಧ್ಯಕ್ಷರು, ಶ್ರೀ ರಾಮ ಭಜನಾ ಮಂದಿದ ದೊಡ್ಡತೋಟ), ಬಶೀರ್ ಕೋಲ್ಚಾರ್ (ಪ್ಲೆ ವೆಲ್ ಗ್ರೂಪ್ ) ಉಪಸ್ಥಿತರಿದ್ದರು.