ಕೊಟ್ಟಾಯಂ: ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬರು ಅರೇಬಿಯನ್ ಡಿಶ್ ಸೇವಿಸಿದ ಬಳಿಕ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಓರ್ತೊಪೆಡಿಕ್ಸ್ ನಲ್ಲಿ ನರ್ಸ್ ವೃತ್ತಿ ಮಾಡುತ್ತಿದ್ದ 33 ವರ್ಷ ವಯಸ್ಸಿನ ರೆಶ್ಮಿ ರಾಜ್ ಈ ಮೃತ ದುರ್ದೈವಿ. ಡಿಸೆಂಬರ್ 29 ರಂದು ಅರೇಬಿಯನ್ ಚಿಕನ್ ಡಿಶ್ ‘ಕುಝಿಮಂದಿ’ ಹಾಗೂ ‘ಅಲ್ ಫಹಮ್’ ನ್ನು ಹೊಟೇಲ್ ನಿಂದ ತರಿಸಿ ತಿಂದಿದ್ದಾರೆ. ಇದ್ದಕ್ಕಿದ್ದಂತೆಯೇ ಆರೋಗ್ಯದಲ್ಲಿ ಏರುಪೇರಾಗಿ ವಾಂತಿ ಮಾಡಿದ್ದಾಳೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ದಲ್ಲಿ ಚೇತರಿಕೆ ಕಾಣದೆ ಇದ್ದಾಗ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮೆಡಿಕಲ್ ಕಾಲೇಜ್ ನಲ್ಲಿ ದಾಖಲಿಸಿದ್ದಾರೆ, ಆದರೂ ಚಿಕಿತ್ಸೆ ಫಲಕಾರಿಯಾಗದೆ ಜನವರಿ 2 ಸೋಮವಾರ ದಂದು ಮೃತಪಟ್ಟಿರುವ ಘಟನೆ ನಡೆದಿದೆ. ಎರಡು ತಿಂಗಳ ಮೊದಲು ಶುಚಿತ್ವ ಇಲ್ಲ ಎಂದು ಈ ಹೊಟೇಲ್ ಬಂದ್ ಕೂಡಾ ಆಗಿದ್ದು, ಇದೀಗ ಪುನಃ ತೆರಿದಿದ್ದು, ಸಾವಿಗೆ ಆಹ್ವಾನ ನೀಡಿದಂತಾಗಿದೆ.
ಇದರ ಬೆನ್ನಲ್ಲೇ ಕೇರಳದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಂಗಳವಾರ ಸರಿ ಸುಮಾರು 40 ಹೋಟೆಲ್‌ಗಳನ್ನು ಬಂದ್ ಮಾಡಿಸಿದ್ದಾರೆ ಹಾಗೂ 62 ಮಂದಿಗೆ ದಂಡ ವಿಧಿಸಿದ್ದಾರೆ. ಈ ವೇಳೆ ರಾಜ್ಯಾದ್ಯಂತ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ 28 ಮಂದಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದೇ ಹೋಟೆಲ್‌ನಲ್ಲಿ ಊಟ ಸೇವಿಸಿದ ಇತರ 20 ಜನರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ ಅದರಲ್ಲಿ 14 ವರ್ಷದ ಯುವಕ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್‌ನ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ ಹಾಗೂ ಹೋಟೆಲನ್ನು ಮುಚ್ಚಲು ಆದೇಶಿಸಿದ್ದಾರೆ.
Advertisement
Advertisement