ಪೈಚಾರು: ಪೈಚಾರ್ ಜಂಕ್ಷನ್ ಬಳಿ ಆಟೋ ರಿಕ್ಷಾಗೆ ಪಿಕ್-ಅಪ್ ಒಂದು ಡಿಕ್ಕಿ ಹೊಡೆದು ಹಿಟ್ & ರನ್ ಮಾಡಿದ ಘಟನೆ ಸಂಭವಿಸಿದೆ. ಬೆಳ್ಳಾರೆ ಭಾಗದಿಂದ ಸುಳ್ಯ ಭಾಗಕ್ಕೆ ಬರುತ್ತಿದ್ದ ಆಟೋ ರಿಕ್ಷಾ ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಪಿಕ್-ಅಪ್ ಡಿಕ್ಕಿ ಹೊಡೆದಿದೆ, ಪಿಕ್-ಅಪ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಅಪಘಾತದ ರಭಸಕ್ಕೆ ಆಟೋ ರಿಕ್ಷಾ ನಜ್ಜುಗುಜ್ಜಾಗಿದ್ದು, ರಿಕ್ಷಾದಲ್ಲಿದ್ದ ಪುಟ್ಟ ಕಂದಮ್ಮ ಸೇರಿ ಒಟ್ಟು ಮೂವರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ