Advertisement
ಸುಳ್ಯ: ಜ-9 ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಕೆ.ವಿ.ಜಿ ಸಮೂಹ ವಿದ್ಯಾಸಂಸ್ಥೆಯ ವತಿಯಿಂದ ಹಸಿರುವಾಣಿಯನ್ನು ಸಮರ್ಪಿಸಲಾಯಿತು. ಕೆ.ವಿ.ಜಿ ಮಾತೃಸಂಸ್ಥೆಯಾದ ನೆಹರೂ ಮೆಮೋರಿಯಲ್ ಕಾಲೇಜಿನ ಮುಂಭಾಗದಲ್ಲಿ ಅಕಾಡೆಮಿಯ ಕೋಶಾಧಿಕಾರಿ ಶ್ರೀಮತಿ ಶೋಭಾ ಚಿದಾನಂದರವರು ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯಸ್ಥರು ಮತ್ತು ಬೋಧಕ-ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
Advertisement