ಸುಳ್ಯ: ಶಾಕಿ‌ರ್ ಕಂಚಿಲ್ಪಾಡಿ ಸಾರಥ್ಯದ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕಂಚಿಲ್ಪಾಡಿ ಹಾಗೂ ಜಾನ್ ಜಿಗರ್ಸ್ ಸುಳ್ಯ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಲೀಗ್ ಮಾದರಿಯ ‘ಕಂಚಿಲ್ಪಾಡಿ ಪ್ರೀಮಿಯರ್ ಲೀಗ್- 8’ ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ‌ ಕಾರ್ಯಕ್ರಮ ಜನವರಿ 07 ರಂದು ಅಡ್ಕಾರಿನ ಕಾರ್ನಿಚ್ ಮೈದಾನದಲ್ಲಿ ನಡೆಯಿತು. ಪಂದ್ಯಾಕೂಟದ ಉದ್ಘಾಟನೆಯನ್ನು ಕಿರಣ್ ಬುಡ್ಲೆಗುತ್ತು ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫವಾಝ್ ಕೆ.ಎಂ ವಹಿಸಿಕೊಂಡರು, ಮಖ್ಯ ಅತಿಥಿಗಳಾಗಿ ಇಬ್ರಾಹಿಂ ಖಾಸಿಂ ಕೆ.ಎಂ, ಬಾತೀಶ ಕಂಚಿಲ್ಪಾಡಿ, ವಿಜಯ ಕುಮಾರ್ ನರಿಯೂರು, ಸಂಶುದ್ದೀನ್ ಜಿ.ಎಂ, ಶರೀಫ್ ಕಂಠಿ, ರವಿಪ್ರಕಾಶ್ ಬುಡ್ಲೆಗುತ್ತು, ಮಜೀದ್ ಎನ್.ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಟ್ಟು ಹದಿನೈದು ತಂಡಗಳು ಈ ಒಂದು ಪಂದ್ಯಾಕೂಟದಲ್ಲಿ ಭಾಗವಹಿಸಿದ್ದು, ಫೈನಲ್‌ ನಲ್ಲಿ

ಸಿಟಿ ಡ್ರೀಮ್ಸ್ ಯುಎಇ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ರನ್ನರ್ ಅಪ್ ಪ್ರಶಸ್ತಿಯನ್ನು ಬಿಎಂಎ ವಾರಿಯರ್ಸ್ ತಂಡ ತನ್ನದಾಗಿಸಿಕೊಂಡಿತು.

ಈ ಸಂಧರ್ಭದಲ್ಲಿ ‘ಕಿರಣ್ ಬುಡ್ಲೆಗುತ್ತು’ ಇವರನ್ನು ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಫವಾಝ್, ಲತೀಫ್ ಅಡ್ಕಾರ್, ಉಬೈದ್ ಕದಿಕಡ್ಕ, ರಹ್ಮಾನ್ ಕದಿಕಡ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ