Advertisement

ಕಾವು ಬದ್ರಿಯಾ ಎಜುಕೇಶನಲ್ ಸೆಂಟರ್ ಇದರ ಬದ್ರಿಯಾ ಮಜ್ಲಿಸ್ ದಶವಾರ್ಷಿಕ, ಸನದು ದಾನ ಮಹಾ ಸಮ್ಮೇಳನ, ಸಯ್ಯಿದ್ ಮುಹಮ್ಮದ್ ಹದ್ದಾದ್ ತಂಙಳ್ ರವರ ನಾಲ್ಕನೇ ಆಂಡ್ ನೇರ್ಚೆ ಕಾರ್ಯಕ್ರಮ ಫೆಬ್ರವರಿ 22, 23ರಂದು ನಡೆಯಲಿದ್ದು ಇದರ ಪ್ರಚಾರ ಪತ್ರವನ್ನು ಜನವರಿ 13 ರಂದು ಕಾವು ಬದ್ರಿಯಾ ಎಜುಕೇಶನಲ್ ಸೆಂಟರ್ ಸಭಾಂಗಣದಲ್ಲಿ ನಡೆದ ಮಾಸಿಕ ಬದ್ರಿಯಾ ಮಜ್ಲೀಸ್ ಕಾರ್ಯಕ್ರಮದಲ್ಲಿ ಬಿಡುಗಡೆ ಗೊಳಿಸಲಾಯಿತು. ಕಾವು ಬದ್ರಿಯಾ ಎಜುಕೇಶನಲ್ ಸೆಂಟರ್ ಇದರ ಸ್ಥಾಪಕ ಅಧ್ಯಕ್ಷ ಸೈಯದ್ ಫಕ್ರುದ್ದೀನ್ ಹದ್ದಾದ್ ತಂಙಳ್ ಪೋಸ್ಟರ್ ಬಿಡುಗಡೆಗೊಳಿಸಿ ಕಾರ್ಯಕ್ರಮದ ರೂಪುರೇಷೆ ಗಳ ಬಗ್ಗೆ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು. ಮಹಾ ಸಮ್ಮೇಳನದಲ್ಲಿ ಮಾಡನ್ನೂರು ಝಿಯಾರತ್ ಸಂಗಮ, ಖತಮುಲ್ ಖುರ್ ಆನ್, ಬೃಹತ್ ಅಫಿಲ್ ಶಿಕ್ಷಣ ಕಟ್ಟಡದ ಶಿಲನ್ಯಾಸ, ಖ್ಯಾತ ಬುರ್ದಾ ಆಲಾಪನಕಾರರಿಂದ ಬುರ್ದಾ ಮಜ್ಲೀಸ್, ಸಾಂಘಿಕ ಶಿಬಿರ, ಬದ್ರಿಯಾ ಮಜ್ಲೀಸ್, ಸೌಹಾರ್ದ ಸಂಗಮ, ಧಾರ್ಮಿಕ ಪ್ರಭಾಷಣ, ಸಾಮೂಹಿಕ ದುವಾ ಸಂಗಮ ನಡೆಯಲಿದೆ. ಈ ಎರಡು ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪ್ರಖ್ಯಾತ ಕುಂಬೋಳ್ ಸಯ್ಯಿದ್ ಕುಟುಂಬದ ನೇತಾರರಾದ ಸಯ್ಯದ್ ಆಟ್ಹ ಕೋಯ ತಂಙಳ್ ಕುಂಬೋಳ್,ಸಯ್ಯಿದ್ ಫಖ್ರುದ್ದೀನ್ ಹದ್ದಾದ್ ತಂಙಳ್,ಸಯ್ಯಿದ್ ಕೂರಿಕ್ಕುಝಿ ತಂಙಳ್ ಮಲಪ್ಪುರಂ, ಹಸ್ಸನ್ ಅಹ್ದಲಿ ತಂಙಳ್, ಸಯ್ಯಿದ್ ಕುಂಞಿ ಕೋಯ ತಂಙಳ್ ಸುಳ್ಯ, ಜೈನುಲ್ ಉಲಮಾ ಮಾಣಿ ಉಸ್ತಾದ್, ಖ್ಯಾತ ಪ್ರಭಾಷಣಕಾರರಾದ ಹುಸೈನ್ ಸಅದಿ ಕೆಸಿ ರೋಡು, ಅನಸ್ ಅಮಾನಿ ಪುಷ್ಪಗಿರಿ, ಅಜ್ಹರುದ್ದೀನ್ ರಬ್ಬಾನಿ ಎರ್ನಾಕುಳಂ,ರಫೀಕ್ ಸಅದಿ, ಹಾಗೂ ಇನ್ನಿತರ ಉಲಮಾ ಪಂಡಿತರು, ಉಮರಾ ನೇತಾರರು, ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಹಾಗೂ ಸ್ವಾಗತ ಸಮಿತಿಯ ಚೇರ್ಮನ್ ಇಬ್ರಾಹಿಂ ಸಅದಿ ಮಾಣಿ ಸ್ವಾಗತ ಸಮಿತಿಯ ವಯ್ಸ್ ಚೇರ್ಮನ್ ಗಳಾದ ಸ್ವಲಾಹುದ್ದೀನ್ ಸಕಾಫಿ ಮಾಡನ್ನೂರು,ಅಬ್ದುಲ್ಲಾ ಅಹ್ಸನಿ ಮಾಡನ್ನೂರು, ಕನ್ವೀನರ್ ಅಬು ಶಾಜಾ ಉಸ್ತಾದ್, ಹಾಗೂ ಸಮಿತಿಯ ಪದಾಧಿಕಾರಿಗಳು ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ