ಎನ್.ಎಂ.ಸಿ ಸುಳ್ಯ: ಪ್ಲೇಸ್ ಮೆಂಟ್ ಆ್ಯಂಡ್ ಕೆರಿಯರ್ ಗೈಡನ್ಸ್ ಕಾರ್ಯಕ್ರಮ.

ಸುಳ್ಯ; ನೆಹರೂ ಮೆಮೋರಿಯಲ್‌ ಕಾಲೇಜಿನ  ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಅಸೋಸಿಯೇಷನ್‌ ನ  ವತಿಯಿಂದ ಪ್ಲೆಸ್‌ಮೆಂಟ್‌ ಅಂಡ್‌ ಕೆರಿಯರ್‌ ಗೈಡೆನ್ಸ್‌ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರುದ್ರಕುಮಾರ್‌ ಎಂ.ಎಂ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ ಧವಕುಮಾರ್‌ ನಿರ್ದೇಶಕರು, ಬಿಸಿನೆಸ್‌ ಡೆವಲಪ್‌ಮೆಂಟ್‌, ಸುರಕ್ಷಾ ಕೆರಿಯರ್‌ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಮಧುಸೂದನ್‌.ಸಿ.ಎಸ್‌, ನಿರ್ದೇಶಕರು  ಟ್ರೈನಿಂಗ್‌ ಸುರಕ್ಷಾ ಕೆರಿಯರ್‌ ಅಕಾಡೆಮಿ ಬೆಂಗಳೂರು ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ  ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜಿನ ವಿದ್ಯಾರ್ಥಿಕ್ಷೇಮಾಧಿಕಾರಿಯಾಗಿರುವ ಶ್ರೀಮತಿ ರತ್ನಾವತಿ ಡಿ ಉಪಸ್ಥಿತರಿದ್ದರು. ಅಸೋಷಿಯೆಷನ್‌ ಸಂಚಾಲಕಿ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ದಿವ್ಯ.ಟಿ.ಎಸ್‌ , ಶ್ರೀ ಶ್ರೀಧರ್.ವಿ ಹಾಗೂ ಶ್ರೀಮತಿ ಗೀತಾ ಶೆಣ್ಯೆ ಮತ್ತು ಅಸೋಸಿಯೇಷನ್‌ನ ವಿದ್ಯಾರ್ಥಿ ಪ್ರತಿನಿಧಿಗಳಾದ ಅನಘ ಹಾಗೂ ಶ್ರೀವತ್ಸ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನಘ ಮತ್ತು ವಿಸ್ಮಿತಾ ಪ್ರಾರ್ಥಿಸಿದರು, ಅನಘ ಎಲ್ಲರನ್ನು ಸ್ವಾಗತಿಸಿ, ರಜತ್‌ ಕುಮಾರ್‌ ವಂದಿಸಿದರು ಹಾಗೂ  ಶಾನ್ಯ.ಪಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ