Advertisement
ಸುಳ್ಯ: ಸ್ಟಾರ್ ಕ್ರಿಕೆಟರ್ಸ್ ಓಲ್ಡ್ ಗೇಟ್ ಇದರ ಆಶ್ರಯದಲ್ಲಿ , ನಾಸಿರ್ ಕಮ್ಮಾಡಿ, ಆಸಿಫ್ ಸ್ಟಾರ್, ಆಸಿಫ್ ಜಯನಗರ ಇವರ ಸಾರಥ್ಯದಲ್ಲಿ ಆಹ್ವಾನಿತ ತಂಡಗಳ 11 ಜನರ ಅಂಡರ್ ಆರ್ಮ್ ‘ಸ್ಟಾರ್ ಪ್ರಿಮಿಯರ್ ಲೀಗ್ ಸೀಸನ್- 6’ ಕ್ರಿಕೆಟ್ ಪಂದ್ಯಾಟ ಜನವರಿ 15 ರಂದು ಮಲ್ನಾಡ್ ಮಹಾತ್ಮ ಗಾಂಧಿ ಪ್ರೌಢಶಾಲೆ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಫೈನಲ್ ಹಣಾಹಣಿಯಲ್ಲಿ ಶಮೀರ್ ಶಾಂತಿನಗರ ಮಾಲೀಕತ್ವದ

‘ಸುಲ್ತಾನ್ ಬಾಯ್ಸ್’ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಮಹಬೂಬ್ ಹಳೆಗೇಟು ಮಾಲೀಕತ್ವದ

‘ ಎಂ ಎಸ್ ಎಫ್’ ತಂಡ ರನ್ನರ್ಸ್ ಗೆ ತೃಪ್ತಿ ಪಟ್ಟುಗೊಂಡಿತು. ಪಂದ್ಯಾಟದ ವೈಯುಕ್ತಿಕ, ಬೆಸ್ಟ್ ಬ್ಯಾಟ್ಸ್ ಮನ್ ಬೆಸ್ಟ್ ಹರೀಶ್, ಬೆಸ್ಟ್ ಕೀಪರ್ ಸೂರ ಓಲ್ಡ್ ಗೇಟ್, ಬೆಸ್ಟ್ ಬೌಲರ್ ಆಸಿಫ್ ಜಯನಗರ, ಬೆಸ್ಟ್ ಫೀಲ್ಡರ್ ಮಜೀದ್, ಫೈನಲ್ ಮ್ಯಾನ್ ಆಫ್ ಮ್ಯಾಚ್ ಇಂದು ಕುಮಾರ್, ಮ್ಯಾನ್ ಆಫ್ ದಿ ಸೀರಿಸ್ ಆಶ್ರಫ್ ಪೈಚಾರ್ ಪಡೆದುಕೊಂಡರು.
Advertisement