ಪಾಲ್ತಾಡ್: ಜನವರಿ ೨೨ ರಂದು ನಡೆಯಲಿರುವ ಪಾಲ್ತಾಡ್ ಪ್ರಿಮಿಯರ್ ಲೀಗ್ ಹತ್ತನೇ ಆವೃತ್ತಿ ಪ್ರಯುಕ್ತ, ನ್ಯೂ ಬ್ರದರ್ಸ್ ಪಾಲ್ತಾಡ್ , ಮ್ಯಾನ್ & ಮೋಡ ಪಾಲ್ತಾಡ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಜಂಟಿ ಸಹಭಾಗಿತ್ವದಲ್ಲಿ, ಯೇನೆಪೋಯ ವೈದ್ಯಕೀಯ ಕಾಲೇಜು ಹಾಗೂ ಯೇನೆಪೋಯ ಆಯುರ್ವೇದ ಆಸ್ಪತ್ರೆ ನರಿಂಗಾನ, ಮಂಗಳೂರು ಇದರ ಸಹಯೋಗದೊಂದಿಗೆ ‘ಉಚಿತ ವೈದ್ಯಕೀಯ ಶಿಬಿರ ಮತ್ತು ಕಣ್ಣಿನ ತಪಾಸಣಾ ಶಿಬಿರ’ ದಿನಾಂಕ ಜನವರಿ 22- 2023 ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 2 ಗಂಟೆ ತನಕ ಮಣಿಕರ ಶಾಲಾ ವಠಾರ ನಡೆಯಲಿದೆ. ಶಿಬಿರದಲ್ಲಿ ತಜ್ಞ ವೈದ್ಯರಿಂದ ರೋಗಗಳ ಉಚಿತ ತಪಾಸಣೆ ಮತ್ತು ಸೂಕ್ತ ಸಲಹೆ ಹಾಗೂ ಉಚಿತ ಔಷಧಿ ನೀಡಲಾಗುವುದು. ಪಾರ್ಶ್ವವಾಯು, ಹೃದಯ ಸಂಬಂಧಿ, ಸಂಧಿವಾತ, ನರರೋಗ, ಬೆನ್ನು ನೋವು, ಕುತ್ತಿಗೆ ನೋವು, ಶೀತ, ಕೆಮ್ಮು, ದಮ್ಮು, ಆಲರ್ಜಿ, ತಲೆನೋವು, ಕಣ್ಣು, ಕಿವಿ, ಮೂಗು, ಗಂಟಲು ಸಂಬಂಧಿ ಕಾಯಿಲೆಗಳು, ತುರಿಕೆ ಕಜ್ಜಿ, ಸೋರಿಯಾಸಿಸ್ ಮುಂತಾದ ಚರ್ಮ ರೋಗಗಳು, ಗ್ಯಾಸ್ಟಿಕ್, ಅಜೀರ್ಣ, ವಾಂತಿ, ಅತಿಸಾರ ಮುಂತಾದ ಉದರ ಸಂಬಂಧಿ ಕಾಯಿಲೆಗಳು, ಫೈಲ್ಸ್, ಫಿಸ್ತುಲಾ, ಪಿಷರ್‌ಗಳಂತಹ ಗುದ ಸಂಬಂಧಿ ರೋಗಗಳು, ಮಕ್ಕಳಿಗೆ ಹಾಗೂ ಸ್ತ್ರೀಯರಿಗೆ ವಿಶೇಷ ತಪಾಸಣೆ ಹಾಗೂ ಉಚಿತ ಔಷಧಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
Advertisement
Advertisement