Advertisement

ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಇಂಟರ್ ಕ್ಲಾಸ್‌ ಕಾಮರ್ಸ್‌ ಫೆಸ್ಟ್‌ “ಸಂಭ್ರಮ್‌ 2K23” ಕಾರ್ಯಕ್ರಮವನ್ನು 24.01.2023ರಂದು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಪ್ರೋ.ಎಂ.ಬಾಲಚಂದ್ರ ಗೌಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ರುದ್ರಕುಮಾರ್‌.ಎಂ.ಎಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಈ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾಗಿರುವ ಶ್ರೀಮತಿ ರತ್ನಾವತಿ.ಡಿರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಫೆಸ್ಟ್ನ ಸಂಚಾಲಕರುಗಳಾದ ಶ್ರೀ ಶ್ರೀಧರ್‌ ವಿ, ಶ್ರೀಮತಿ ಗೀತಾ ಶೈಣೈ, ಶ್ರೀಮತಿ ದಿವ್ಯ.ಟಿ.ಎಸ್‌ ಉಪಸ್ಥಿತರಿದ್ದರು. ಅಂತಿಮ ಬಿ.ಕಾಂ ವಿದ್ಯಾರ್ಥಿಗಳಾದ ಕುಮಾರಿ ಅನಘ.ಅರ್.ಯು ಸ್ವಾಗತಿಸಿ ಶ್ರೀವತ್ಸ ವಂದಿಸಿದರು, ಕುಮಾರಿ ಶಾನ್ಯ.ಪಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 16 ತಂಡಗಳು  ಭಾಗವಹಿಸಿ ಹಣಕಾಸು, ಪೋಟೋಗ್ರಾಫಿ, ಮಾರುಕಟ್ಟೆ, ಮಾನವ ಸಂಪನ್ಮೂಲ ಬಳಕೆ ಮೊದಲಾದವುಗಳನ್ನು ತಮ್ಮ ಜೀವನದಲ್ಲಿ ಯಾವ ರೀತಿ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದು ಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರುದ್ರಕುಮಾರ್.ಎಂ.ಎಂ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಶ್ರೀ ಅಶೋಕ್‌ ವಿಮನ್‌, ಸೀನಿಯರ್‌ ಬ್ರಾಂಚ್‌ ಮ್ಯಾನೇಜರ್‌, ಬ್ಯಾಂಕ್‌ ಆಫ್‌ ಬರೋಡ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಬಹಳಷ್ಟಿದೆ ಇಲ್ಲಿ ಸಿಕ್ಕ ವಿಚಾರಗಳು ತಮ್ಮ ಜೀವನದಲ್ಲಿ ಪ್ರಯೋಜನವಾಗಬಹುದು ಎಂದರು. ವೇದಿಕೆಯಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ರತ್ನಾವತಿ.ಡಿ ಫೆಸ್ಟ್‌ನ ಸಂಚಾಲಕರಾದ ಶ್ರೀ ಶ್ರೀಧರ.ವಿ, ಶ್ರೀಮತಿ ಗೀತಾ ಶೆಣೈ, ಶ್ರೀಮತಿ ದಿವ್ಯ ಟಿ.ಎಸ್ ಫೆಸ್ಟ್‌ನ ವಿದ್ಯಾರ್ಥಿ ಸಂಚಾಲಕರಾದ ಕುಮಾರಿ ಅನಘ ಆರ್.ಯು ಹಾಗೂ ಶ್ರೀವತ್ಸ ಮತ್ತು ತರಗತಿ ಪ್ರತಿನಿಧಿಗಳಾದ ರಜತ್‌ ಕುಮಾರ್‌ ಹಾಗೂ ವಿಸ್ಮಿತಾ ಉಪಸ್ಥಿತರಿದ್ದರು

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ