Advertisement
ಸುಳ್ಯ: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆಯ ಅನ್ವಯ ಅಧಿಕಾರಿಗಳ ವರ್ಗಾವಣೆಯಾಗುತ್ತಿದೆ. ಇದರಂತೆ ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ಕೂಡಾ ವರ್ಗಾವಣೆಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ಗ್ರಾಮಾಂತರ ವೃತ್ತಕ್ಕೆ ನವೀನ್ ಚಂದ್ರರು ವರ್ಗಾವಣೆಯಾಗಿದ್ದು, ಸುಳ್ಯಕ್ಕೆ ಅಂಕೋಲದಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಆಗಿರುವ ಸಂತೋಷ್ ಶೆಟ್ಟಿ ಎಂಬವರು ಆಗಮಿಸಲಿದ್ದಾರೆ. ಕ್ರೈಂ ಎಸ್.ಐ. ರತ್ನ ಕುಮಾರ್ ರಿಗೂ ವರ್ಗಾವಣೆಯಾಗಿದ್ದು ಚಿಕ್ಕಮಗಳೂರಿಗೆ ವರ್ಗಾವಣೆಗೊಂಡಿದ್ದಾರೆಂದು ತಿಳಿದುಬಂದಿದೆ.
Advertisement