Advertisement
ಸೊಣಂಗೇರಿ ಬಳಿ ಮಹಿಳೆಯ ಕುತ್ತಿಗೆಯಿಂದ ಚಿನ್ನ ಕಸಿದು ಪರಾರಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಸೊಣಂಗೇರಿ ಸುಳ್ಯ ರಸ್ತೆ ಬದಿ ಹೊಸಗದ್ದೆ ಬಳಿ ಹರೀಶ್ ಮನೆಯಲ್ಲಿ ಅವರ ಪತ್ನಿ ನಿರ್ಮಿತ ಎಂಬುವವರು ನಿನ್ನೆ ರಾತ್ರಿ 10.15pm ರ ವೇಳೆಗೆ ಮನೆಯ ಹಿಂಬದಿ ಶೌಚಾಲಯಕ್ಕೆ ತೆರಳಿ ಹಿಂದುರಿಗುತ್ತಿರುವಾಗ ಮನೆಯ ಹಿಂಬದಿಯಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ನಿರ್ಮಿತ ರ ಕುತ್ತಿಗೆ ಹಿಸುಕಿ ಕುತ್ತಿಗೆಯಲ್ಲಿದ್ದ ೫ ಪವನ್ ನ ಚಿನ್ನದ ಸರವನ್ನು ಎಳೆದು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Advertisement