ಅಲ್- ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ವತಿಯಿಂದ ನಡೆದ ಸಾಮೂಹಿಕ ಸುನ್ನತ್ (ಮುಂಜಿ) ಕಾರ್ಯಕ್ರಮ ಅಕ್ಟೋಬರ್ ೬ ರಂದು ಮದರಸ ವಠಾರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಸತ್ತಾರ್ ಪಿಎ (ಅಧ್ಯಕ್ಷರು ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್) ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿರುವ ಇಬ್ರಾಹಿಂ ಪಿ, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾಗಿರುವ ಬಶೀರ್ ಆರ್ ಬಿ, ಜುಮಾ ಮಸೀದಿಯ ಉಪಾಧ್ಯಕ್ಷರಾಗಿರುವ ಇಬ್ರಾಹಿಂ S A, ಡಾ|| ಫಯಾಜ್ ಮಂಜನಾಡಿ, ಬದುರುದ್ದೀನ್ ಕಾವೇರಿ, ಹಾಗೂ ಅಲ್ ಅಮೀನ್ ಯೂತ್ ಸೆಂಟರ್ ಉಪಾಧ್ಯಕ್ಷರಾಗಿರುವ ಹನೀಫ್ alfa ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಸಲಾಂ ಪಿಎಸ್, ಬಾತಿಶಾ ಬಿ ಎಮ್ ಹಾಗೂ ಪದಾಧಿಕಾರಿಗಳಾದ ಅಶ್ರಫ್, ಹನೀಫ್ ಪಿಕೆ, ಪವಾಝ್, ತಸ್ರೀಫ್, ಹಾರಿಸ್ ಸೋಣಂಗೇರಿ, ಅನೀಸ್, ಕರೀಂ ಕೆ ಎಂ ಹಾಗೂ ಜಮಾತಿನ ಸರ್ವ ಸದಸ್ಯರು ಕೂಡ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಾಲಿಯವರು ಸ್ವಾಗತಿಸಿ, ಜುನೈದ್ ರವರು ನಿರೂಪಣೆಗೈದರು.