ಸುಳ್ಯ: ಪತ್ರಕರ್ತ, ಲೇಖಕ, ರಾ| ಚಿಂತನ್ ರವರು ಸುಳ್ಯ ಕ್ಕೆ ಭೇಟಿ ‌ನೀಡಿದ್ದಾರೆ. ರವಿ‌ಬೆಳಗೆರೆ ಯವರ ‘ಹಾಯ್ ಬೆಂಗಳೂರ್’, ಲಂಕೇಶ್ ಪತ್ರಿಕೆ, ಸುವರ್ಣ ನ್ಯೂಸ್, ರಾಜ್ ನ್ಯೂಸ್ ಹೀಗೆ ಹತ್ತು ಹಲವು ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ, ‘ರಾ| ಚಿಂತನ್’ ರವರು ಇಂದು ಮಾಡನ್ನೂರಿನ ನೂರುಲ್ ಹುದಾ ಸ್ಟೂಡೆಂಟ್ ಯುನಿಯನ್ ಆಯೋಜಿಸಿದ್ದ ‘ಮೈನಾರಿಟಿ ಪಾಲಿಟಿಕ್ಸ್, ಎತಿಕಲ್ ಜರ್ನಲಿಸಂ’ (Minority Politics, Ethical Journalism) ವಿಷಯದ ಬಗ್ಗೆ, ಕಾರ್ಯಕ್ರಮ ಒಂದರಲ್ಲಿ ಮಾತನಾಡಲು ಆಗಮಿಸಿದ್ದರು. ನಂತರ ಸುಳ್ಯ ದ ಕುರುಂಜಿಭಾಗ್ ನಲ್ಲಿರುವ ಪಟೇಲ್ ಮೊಬೈಲ್, ಟೌನ್ ಕ್ಯೂಬ್ ಕಫೆ ಹಾಗೂ ನಾಕ್ ಸ್ಟುಡಿಯೋಗೆ ಭೇಟಿ‌ ನೀಡಿದ್ದು, ಅಲ್ಲಿ ನೆರದಿಂತಹ ಯುವಕರ ಜೊತೆ ಕೆಲ ಕಾಲ ಸಂವಾದ ನಡೆಸಿದ್ದಾರೆ. ಈ ಸಂಧರ್ಭದಲ್ಲಿ ಸಾಮಾಜಿಕ ಚಿಂತಕರಾದ ಅಬ್ಬಾಸ್ ಸಿ.ಪಿ, ಡ್ಯಾನಿ, ಮಹಬೂಬ್

, ಪಟೇಲ್ ಮೊಬೈಲ್ ಮಾಲಕ ರಹಿಮಾನ್, ಸಾದಿಕ್, ನಾಕ್ ಸ್ಟುಡಿಯೋ ಮಾಲಕರಾದಂತಹ ಝುಬೈರ್, ಅಫೀಝ್ ಸುಳ್ಯ, ಟೌನ್ ಕ್ಯೂಬ್ ಮಾಲಕರಾದ ನಿಝಾಮ್, ಆಶಿಕ್, ಹಾಗೂ ಮಿಕ್ದಾದ್, ಅರ್ಫಾತ್, ನಜೀಬ್, ಜಲೀಲ್ ಮೊದಲಾದವರು ಉಪಸ್ಥಿತರಿದ್ದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ