ಜೂ. ೦೬ ರಿಂದ ಜೂ. ೦೯ ರವರೆಗೆ ಬೆಂಗಳೂರಿನ ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜಿನ ಆಶ್ರಯದಲ್ಲಿ ನಡೆದ ರಾಜೀವ್‌ಗಾಂಧಿ ವಿ.ವಿ.ಯಅಂತರ್ ಕಾಲೇಜು ಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಕೆ.ವಿ.ಜಿ. ಡೆಂಟಲ್ ಕಾಲೇಜು, ಪೈನಲ್ ಪಂದ್ಯಾವಳಿಯಲ್ಲಿ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ತಂಡದ ವಿರುದ್ಧ ೩-೨ ರಿಂದ ಜಯಗಳಿಸಿ ಚಾಂಪಿಯನ್ ಆಗಿ ಮೂಡಿಬಂದಿದೆ. ತಂಡದ ನಾಯಕಿಯಾಗಿ ಓರಲ್ ಸರ್ಜರಿ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ|| ಬೀನಿಸ್ ಸೈಯದ್ ಹಾಗೂ ಬಿ.ಡಿ.ಯಸ್. ವಿದ್ಯಾರ್ಥಿನಿಯರಾದ ಕು. ಪ್ರಕೃತಿ ಎಂ.ಕೆ., ಕು.ಕವನಯಸ್. ಹಾಗೂ ಕು. ಸೈಯದ್ ನೂರ್ ಜೋಹ್ರಾ ಪಂದ್ಯಾವಳಿಯಲ್ಲಿ ಕಾಲೇಜಿನ ಪರವಾಗಿ ಭಾಗವಹಿಸಿದ್ದರು. ಅಕಾಡೆಮಿಆಫ್ ಲಿಬರಲ್‌ಎಜುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ|| ರೇಣುಕಾಪ್ರಸಾದ್ ಕೆ.ವಿ., ನಿರ್ದೇಶಕರುಗಳಾದ ಡಾ|| ಜ್ಯೋತಿಆರ್. ಪ್ರಸಾದ್ ಮತ್ತು ಡಾ|| ಅಭಿಜ್ಞಾ ಕೆ.ಆರ್., ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಲಹೆಗಾರರಾದ ಡಾ|| ಉಜ್ವಲ್‌ಯು.ಜೆ., ಪ್ರಾಂಶುಪಾಲರಾದಡಾ|| ಮೋಕ್ಷ ನಾಯಕ್ ಹಾಗೂ ಆಡಳಿತ ಮಂಡಳಿಯವರು, ಎಲ್ಲಾ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Advertisement
Advertisement