ಸುಳ್ಯ: ಫ್ರೆಂಡ್ಸ್ ಫಾರೆವರ್ ಅರ್ಪಿಸುವ ಹಿರಿಯರ ‘ಓಲ್ಡ್ ಈಸ್ ಗೋಲ್ಡ್’ ಸೀಸನ್- ೫ ಹಾಗೂ ಯುವಕರ ‘ಫ್ರೆಂಡ್ಸ್ ಫಾರೆವರ್ ಚಾಂಪಿಯನ್ ಲೀಗ್ ಸೀಸನ್- ೫’ ಎರಡು ಪಂದ್ಯಾಕೂಟಗಳು ದಿನಾಂಕ ಫೆಬ್ರವರಿ 5 ರಂದು, ಶಾಂತಿನಗರ ಕ್ರೀಡಾಂಗಣದಲ್ಲಿ ನಡೆಯಿತು. ಹಿರಿಯರ ಓಲ್ಡ್ ಈಸ್ ಗೋಲ್ಡ್ ಪಂದ್ಯದ ಚಾಂಪಿಯನ್ ಆಗಿ ಸಿದ್ದೀಕ್ ಮಾಲೀಕತ್ವ

‘ಅರ್ತಾಜೆ ಬ್ರದರ್ಸ್’ ಹೊರಹೊಮ್ಮಿದರೆ, ಶಾಫಿ ಪ್ರಗತಿ ಮಾಲೀಕತ್ವದ

‘ಪ್ರಗತಿ ಹಿಟ್ಟರ್ಸ್’ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ವೈಯುಕ್ತಿಕ


ಬೆಸ್ಟ್ ಬ್ಯಾಟ್ಸ್ ಮನ್ ಅಝೀಝ್ ಆ್ಯಪಲ್


ಪಡೆದುಕೊಂಡರು.
ಯುವಕರ ಫ್ರೆಂಡ್ಸ್ ಫಾರೆವರ್ ಚಾಂಪಿಯನ್ ಲೀಗ್ ಸೀಸನ್- 5′ ರ ಪಂದ್ಯಾ ಕೂಟದಲ್ಲಿ ಹನೀಫ್ ಆಲ್ಫಾ ಮಾಲೀಕತ್ವದ

‘ಆಲ್ಫಾ ಬ್ಲಾಸ್ಟರ್ಸ್’ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಆಶ್ರಫ್ ಮಾಲೀಕತ್ವದ

‘ರಾಯಲ್ ಸ್ಟ್ರೈಕರ್’ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ವೈಯುಕ್ತಿಕ





ಪಡೆದುಕೊಂಡರು.
ಈ ಪಂದ್ಯವು ಹಲವಾರು ವಿಶೇಷತಗಳಿಂದ ಕೂಡಿದ್ದವು,
ಉನೈಸ್ ಎಂಬ ಪ್ರತಿಭೆಗೆ ಸನ್ಮಾನ:-
ಕ್ರೀಡೆಗೆ ಅಂಗವೈಕಲ್ಯತೆ ಯಾವುದು ಅಡ್ಡಿಯಲ್ಲ, ಮನಸ್ಸೊಂದಿದ್ದರೆ ಮಾರ್ಗ ಎಂಬುದಕ್ಕೆ ಉನೈಸ್ ಉದಾಹರಣೆಗೆಯಾಗಿದ್ದಾರೆ. ಕ್ರಿಕೆಟ್ ಪಂದ್ಯಾಟದಲ್ಲಿ ಅವರ ಹುಮ್ಮಸ್ಸು, ಕ್ರೀಡಾಸ್ಪೂರ್ತಿ ಮನಗಂಡು ಸನ್ಮಾನಿಸಲಾಯಿತು. ಸುಳ್ಯ ಪೈಚಾರು ಭಾಗದ ಯುವಕ ಉನೈಸ್, ಅವರ ಎರಡು ಮೊಣಕಾಲು ಮತ್ತು ಪಾದಗಳು ಸಂಪೂರ್ಣ ಅಂಗವೈಕಲ್ಯತೆಯನ್ನು ಹೊಂದಿದ್ದರು ಇತರ ಸಾಮಾನ್ಯ ಯುವಕರೊಂದಿಗೆ ಅವರಿಗೆ ಸಮಾನವಾಗಿ ಮೈದಾನದಲ್ಲಿ ಕ್ರಿಕೆಟ್ ಆಟದ ಪ್ರತಿಯೊಂದು ವಿಭಾಗದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಇತರರಿಗೆ ಮಾದರಿಯಾಗಿದ್ದಾರು. ಅವರ ಕ್ರೀಡೆಯನ್ನು ಗುರುತಿಸಿ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ಅಧ್ಯಕ್ಷರಾದ ಡಾlಬಶೀರ್ ಆರ್ ಬಿ ರವರು ತಮ್ಮ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.
ಹಾಗೂ ಪ್ರತಿಯೊಂದು ಪಂದ್ಯವು ಯೂಟ್ಯೂಬ್ ನಲ್ಲಿ ನೇರ ಪ್ರಸಾರ ನೀಡಲಾಗಿತ್ತು, ಆಟಗಾರರಿಗೂ, ಎಲ್ಲಾ ವೀಕ್ಷಕರಿಗೂ, ಉಚಿತ ಎರಡು ಬಗೆಯ ತಂಪು ಪಾನೀಯ, ಮಧ್ಯಾಹ್ನದ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.