Advertisement
ಸುಳ್ಯ: ಎಂ.ಜಿ ಬಾಯ್ಸ್ ಸುಳ್ಯ ಇದರ ಆಶ್ರಯದಲ್ಲಿ ದಿ| ಶಿವಕುಮಾರ್ ಅವರ ಸ್ಮರಣಾರ್ಥ, ಕೆಎಫ್’ಡಿಸಿ ಹಾಗೂ ಸ್ಥಳೀಯ ತಂಡಗಳ ಸೀಮಿತ ಅಂಡರ್ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಸೀಸನ್- 2, ‘ಎಂ.ಜಿ ಟ್ರೋಫಿ 2023’ ಕ್ರಿಕೆಟ್ ಪಂದ್ಯಾಟವು ದಿನಾಂಕ 19 ಫೆಬ್ರವರಿ 2023ನೇ ಆದಿತ್ಯವಾರ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಲ್ಬೈಲ್ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಚಾಂಪಿಯನ್ ಆಗಿ ಕಿಂಗ್ ಫಿಶ್ ಪೈಚಾರ್ ಹಾಗೂ ರನ್ನರ್ ಪ್ರಶಸ್ತಿಯನ್ನು ಎಂ ಜಿ ಬಾಯ್ಸ್ ಪಡೆದುಕೊಂಡಿತು. ಈ ಪಂದ್ಯಕೂಟದ ವೈಯುಕ್ತಿಕ ಪ್ರಶಸ್ತಿಗಳಾದ, ಮ್ಯಾನ್ ಆಫ್ ದಿ ಸೀರೀಸ್- ಅಸಿಫ್, ಮ್ಯಾನ್ ಆಫ್ ದಿ ಮ್ಯಾಚ್ ಝುಬೈರ್ ಮೆನ್ಝ್, ಬೆಸ್ಟ್ ಫೀಲ್ಡರ್ ಶಾನಿಫ್, ಬೆಸ್ಟ್ ಬೌಲರ್ ಸಂಜಯ್, ಬೆಸ್ಟ್ ಬ್ಯಾಟ್ಸ್ ಮನ್ ಅಜಯ್, ಸ್ವೀಕರಿಸಿದರು

Advertisement