ಮಸ್ಕತ್: ಅನ್ಸಾರು ಮಸಾಕೀನ್ ವಾರ್ಷಿಕ ಮಹಾಸಭೆ ಮತ್ತು ಮಾಸಿಕ ಸ್ವಲಾತ್ ಅನ್ಸಾರುಲ್ ಮಸಾಕೀನ್ ಸ್ಥಾಪಕರೂ ಗೌರ್ವಾಧ್ಯಕ್ಷರೂ ಆದ ಸಯ್ಯದ್ ಎಣ್ಮೂರು ತಂಙಳ್ ರವರ ನೇತ್ರತ್ವದಲ್ಲಿ 2024 ಅಕ್ಟೋಬರ್ 10 ಗುರುವಾರ ರಾತ್ರಿ ರಶೀದ್ ಶಾಂತಿನಗರ ರವರ ಮಸ್ಕತ್ ನಿವಾಸದಲ್ಲಿ ನಡೆಯಿತು.


2013 ರಲ್ಲಿ ಸುಳ್ಯದ ಯುವಕರಿಗಾಗಿ ರಚಿಸಿದ ಅನ್ಸಾರುಲ್ ಮಸಾಕೀನ್ ಸಂಘಟನೆಯ ಅಧೀನದಲ್ಲಿ ಪ್ರತೀ ತಿಂಗಳು ಸ್ವಲಾತ್ ಮಜ್ಲಿಸ್ ನಡೆಯುತ್ತಿದ್ದು. ಸುಳ್ಯ ತಾಲೂಕಿನ ಹಲವಾರು ಬಡವರ ಮದುವೆಗಳಿಗೆ ಮತ್ತು ಚಿಕಿತ್ಸಾ ವೆಚ್ಚಕ್ಕೆ ಸಹಾಯ ಮಾಡಿ ಅವರ ಕಣ್ಣೀರೊರೆಸಲು ಈ ಸಂಘಟನೆಗೆ ಸಾಧ್ಯವಾಗಿದೆ. ಹಾಗೇ ಕಳೆದ ನಾಲ್ಕೈದು ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಶ್ರಫ್ ಭಾರತ್ ರವರು ಉದ್ಯೋಗ ನಿಮಿತ್ತ ಸೌದಿ ಅರೇಬಿಯಾ ಗೆ ತೆರಳುತ್ತಿರುವುದರಿಂದ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.


ಒಮಾನಿನ ವಿವಿಧ ಕಡೆಗಳಲ್ಲಿ ಉದ್ಯೋಗದಲ್ಲಿ ತೊಡಗಿಕೊಂಡಿರುವ ಸುಳ್ಯದ ಹಲವಾರು ಯುವಕರು ಈ  ಸಭೆಯಲ್ಲಿ ಭಾಗವಿಹಿಸಿದ್ದರು. ಸಂಘಟನೆಯ ರೂವಾರಿಯಾದ ಎಣ್ಮೂರು ತಂಙಳ್ ರವರನ್ನು ಕೂಡಾ ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಭಾರತ್ ಲೆಕ್ಕ ಪತ್ರ ಮಂಡಿಸಿದರು. ಪ್ರಸ್ತುತ ಸಮಿತಿಯನ್ನು ಬರ್ಕಾಸ್ತುಗೊಳಿಸಿ ನೂತನ ಸಮಿತಿಗೆ ರಶೀದ್ ಶಾಂತಿನಗರ ಪುನರಾಯ್ಕೆಯಾದರು, ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ಸುಳ್ಯ ಹಾಗೂ ಕೋಶಾಧಿಕಾರಿಯಾಗಿ ಉಸ್ಮಾನ್ ಝುಹ್ರಿ ಯವರನ್ನು ಆಯ್ಕೆ ಮಾಡಲಾಯಿತು. ರಶೀದ್ ಶಾಂತಿನಗರ ಅಧ್ಯಕ್ಷ ಭಾಷಣ ಮಾಡಿದರು ಮತ್ತು ಅಶ್ರಫ್ ಭಾರತ್ ರವರು ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *