Advertisement

ಸುಳ್ಯ ಮೊಗರ್ಪಣೆ ಯುನಿಟ್ ಕರ್ನಾಟಕ ಮುಸ್ಲಿಂ ಜಮಾಅತ್ ನೂತನ ಸಮಿತಿ ರಚನಾ ಸಭೆ ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಫೆ.21ರಂದು ನಡೆಯಿತು. ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಶೌಕತ್ ಅಲಿ ಸಖಾಫಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಘಟನೆಯ ಮಹತ್ವದ ಬಗ್ಗೆ, ಮತ್ತು ಅದರಿಂದ ಸಮಾಜಕ್ಕೆ ನೀಡುವ ಕೊಡುಗೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸಮಿತಿಯ ಮುಖಂಡರುಗಳಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ವೀಕ್ಷಕರದ ಅಬ್ದುಲ್ ಹಮೀದ್ ಸುಣ್ಣ ಮೂಲೆ, ಸ್ಥಳೀಯ ಜಮಾತ್ ಕಮಿಟಿ ಮುಖಂಡರಾದ ಹಾಜಿ ಅಬ್ದುಲ್ ಸಮದ್, ಎಸ್ ವೈ ಎಸ್ ಮೊಗರ್ಪಣೆ ಬ್ರಾಂಚ್ ಅಧ್ಯಕ್ಷ ಬಶೀರ್ ಸಕಾಫಿ, ಕಾರ್ಯದರ್ಶಿ ಸಮೀರ್ ಮೊಗರ್ಪಣೆ ಉಪಸ್ಥಿತರಿದ್ದರು.

ಬಳಿಕ ಕರ್ನಾಟಕ ಮುಸ್ಲಿಂ ಜಮಾಅತ್ ಮೊಗರ್ಪಣೆ ಯುನಿಟ್ ಸ್ಥಾಪಕ ಸಮಿತಿ ರಚಿಸಿ ನೂತನ ಅಧ್ಯಕ್ಷರಾಗಿ ಹಸೈನಾರ್ ಜಯನಗರ, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫ ಮೊಗರ್ಪಣೆ, ಕೋಶಾಧಿಕಾರಿಯಾಗಿ ಯೂಸುಫ್ ಮಾಸ್ತರ್ ಅಡ್ಕ, ಉಪಾಧ್ಯಕ್ಷರುಗಳಾಗಿ ಅಬ್ದುಲ್ಲಾ ಹಾಜಿ ಜಯನಗರ, ಅಶ್ರಫ್ ಅಂಜುಮಿ, ಜೊತೆ ಕಾರ್ಯದರ್ಶಿಗಳಾಗಿ ಇಸ್ಮಾಯಿಲ್ ಸಾಹೇಬ್ ಪಾಜಪಳ್ಳ, ಇಸ್ಮಾಯಿಲ್ ಶಾಂತಿನಗರ, ನಿರ್ದೇಶಕರುಗಳಾಗಿ ಕೆ ಎಂ ಮುನೀರ್, ಸಿ ಎಂ ಉಸ್ಮಾನ್, ಅಬ್ದುಲ್ ರಶೀದ್ ಕಮ್ಮಾಡಿ ರವರನ್ನು ಆಯ್ಕೆ ಮಾಡಲಾಯಿತು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ