ಸುಳ್ಯ: ಫೆಬ್ರವರಿ 24ರಂದು ಮೊಗರ್ಪಣೆ ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಿ ಫುಡ್ ರವರು ಧ್ವಜಾರೋಹಣ ಮಾಡುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ ಅವರ ನೇತೃತ್ವದಲ್ಲಿ ದರ್ಗಾದಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.


ಸಂಜೆ ಸ್ಥಳೀಯ ಮಸೀದಿ ಮುದರ್ರಿಸ್ ಹಾಗೂ ನೂರುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಮ್, ಅಧ್ಯಾಪಕ ವೃಂದದವರ ನೇತೃತ್ವದಲ್ಲಿ ದ್ಸಿಕ್ರ್ ಹಲ್ಕ ಸಾಮೂಹಿಕ ದುವಾ ಕಾರ್ಯಕ್ರಮ ನಡೆಯಿತು. ರಾತ್ರಿ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಫಝಲ್ ಕೊಯಮ್ಮ ತಂಙಳ್ ಕೂರತ್ ರವರಿಂದ ಆಧ್ಯಾತ್ಮಿಕ ಕೀರ್ತನೆ ಮತ್ತು ದುವಾ ಸಂಗಮ ನಡೆಯಿತು. ಸಭಾ ವೇದಿಕೆಯನ್ನು ಅಸ್ಸಯ್ಯಿದ್ ಕುಂಞಿ ಕೋಯಾ ತಂಙಳ್ ಸಅದಿ ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಪ್ರಭಾಷಣಕಾರರಾಗಿ ಖ್ಯಾತವಾಗ್ಮಿ ಕಬೀರ್ ಇಮಮಿ ಸಕಾಫಿ ಕಾಸರಗೋಡು ಭಾಗವಹಿಸಿ ಮಾತನಾಡಿ ಪ್ರತಿಯೊಬ್ಬ ಮುಸಲ್ಮಾನನಿಗೆ ಅಲ್ಲಾಹನ ಆರಾಧನೆ ಕಡ್ಡಾಯವಾಗಿದ್ದು ಜೀವನದ ಬಹು ಮುಖ್ಯ ಅಂಗವಾಗಿದೆ ಎಂದು ವಿವರಿಸಿದರು. ವೇದಿಕೆಯಲ್ಲಿ ಪೈಚಾರು ಬದ್ರಿಯಾ ಜುಮಾ ಮಸೀದಿ ಖತೀಬರಾದ ಮುನೀರ್ ಸಕಾಫಿ,ಬಅಧ್ಯಕ್ಷ ಟಿ ಎ ಶರೀಫ್, ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್ ಸಂಶುದ್ದಿನ್, ಮೊಗರ್ಪಣೆ ಮಸೀದಿ ಕಮಿಟಿ ಉಪಾಧ್ಯಕ್ಷ ಸಿ ಎಂ ಉಸ್ಮಾನ್,ಮಾಜಿ ಅಧ್ಯಕ್ಷರುಗಳಾದ ಹಾಜಿ ಪಳ್ಳಿಕುಂಞಿ, ಕೆ ಹಸ್ಸನ್ ಹಾಜಿ, ಹಾಲಿ ಸದಸ್ಯರಾದ ಅಬ್ದುಲ್ ಖಾದರ್ ಶಾಂತಿನಗರ, ಮುನೀರ್ ಹಳೆಗೇಟು, ಹಾಗೂ ಇನ್ನಿತರ ಧಾರ್ಮಿಕ ಪಂಡಿತರು, ಉಮರಾ ನೇತಾರರು ಉಪಸ್ಥಿತರಿದ್ದರು. ಎನ್ ಐ ಎಂ ಸದರ್ ಮುಅಲ್ಲಿಮ್ ಮಹಮ್ಮದ್ ಸಕಾಫಿ ಸ್ವಾಗತಿಸಿದರು. ಫೆ.25ರಂದು ಮಗರಿಬ್ ನಮಾಜ್ ಬಳಿಕ ನಡೆದ ಉರೂಸ್ ಕಾರ್ಯಕ್ರಮದಲ್ಲಿ ಜಮಾತಿನ ಸದಸ್ಯರು ಹಾಗೂ ಮೊಗರ್ಪಣೆ ಶರಿಅತ್ ಕಾಲೇಜಿನ ವಿದ್ಯಾರ್ಥಿಗಳು ಪಠಿಸಿದ ಖತಂ ಕುರ್ ಆನ್, ಹಾಗೂ ತಹಲೀಲ್ ಸಮರ್ಪಣೆ ದುವಾ ಮಜ್ಲೀಸ್ ಹಾಫಿಲ್ ಶೌಕತ್ ಅಲಿ ಸಖಾಫಿರವರ ನೇತೃತ್ವದಲ್ಲಿ ನಡೆಯಿತು. ಬಳಿಕ ನಡೆದ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತ ವಾಗ್ಮಿ ಹಾಫಿಲ್ ಮಶ್‌ಹೂದ್ ಸಖಾಫಿ ಗೂಡಲ್ಲೂರು ಪ್ರಭಾಷಣ ಮಾಡಿ ಪೈಗಂಬರ್ ಮೊಹಮ್ಮದ್ ಅವರ ಮೇಲಿನ ಪ್ರೀತಿಗಿಂತ ಮಿಗಿಲಾದ ಪ್ರೀತಿ ಬೇರೆ ಯಾವುದೇ ಇಲ್ಲ. ಸ್ನೇಹ ವಿಶ್ವಾಸದಿಂದ ಕೂಡಿದ ಜೀವನವೇ ಶ್ರೇಷ್ಠ ಎಂದು ಹೇಳಿದರು. ವೇದಿಕೆಯಲ್ಲಿ ಹಾಫಿಲ್ ಸೌತ್ ಅಲಿ ಸಕಾಫಿ, ಶಾಂತಿನಗರ ಮದರಸ ಸದರ್ ಮುಅಲ್ಲಿಂ ಅಬ್ದುಲ್ ರಶೀದ್ ಝೈನಿ, ಮೊಗರ್ಪಣೆ ಮದರಸ ಮೊಅಲ್ಲಿಂರಾದ ಹಂಝ ಸಕಾಪಿ ಸಾಲೆತ್ತೂರು, ಮೂಸ ಮುಸ್ಲಿಯರ್, ನಾಸಿರ್ ಸಕಾಫಿ, ದಫ್ ಅಸೋಸಿಯೇಷನ್ ಅಧ್ಯಕ್ಷ ಡಿ ಇಬ್ರಾಹಿಂ, ಜಮಾತ್ ಕಮಿಟಿ ಉಪಾಧ್ಯಕ್ಷ ಸಿಎಂ ಉಸ್ಮಾನ್, ಕಟ್ಟಡ ಸಮಿತಿ ಸಂಚಾಲಕ ಹಾಜಿ ಅಬ್ದುಲ್ ಸಮದ್, ನಾವೂರು ಅನ್ಸಾರಿಯ ಜುಮಾ ಮಸೀದಿ ಖತಿಬರಾದ ಉಮರ್ ಮುಸ್ಲಿಯರ್ ಮರ್ದಾಳ, ಮೊದಲಾದವರು ಉಪಸ್ಥಿತರಿದ್ದರು. ಜಯನಗರ ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ ಸ್ವಾಗತಿಸಿದರು. ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸುಪ್ರಸಿದ್ಧ ಇಸ್ಲಾಮಿಕ್ ಗಾಯಕ ಕೋಯ ಕಾಪಾಡ್ ತಂಡದವರಿಂದ ಕವಾಲಿ ಹಾಗೂ ಇಶಲ್ ನೈಟ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸ್ಥಳಿಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಉದ್ಘಾಟಿಸಿದರು . ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಿ ಫುಡ್ ವಹಿಸಿದ್ದರು. ಕೇರಳ ಸರ್ಕಾರದ ಜಾನಪದ ಅಕಾಡೆಮಿಯ ಉಪಾಧ್ಯಕ್ಷರಾದ ಕೋಯಾ ಕಾಪಾಡ್ ಅವರನ್ನು ಸುಳ್ಯ ಭೇಟಿ ಹಿನ್ನಲೆ ಯಲ್ಲಿ ದ. ಕ. ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮತ್ತು ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಮೊಗರ್ಪಣೆ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್,ಮಿಸಬಾಹಿ ಉಸ್ತಾದ್ ಓಟೆಪದವು, ಮೊಗರ್ಪಣೆ ಮುದರ್ರಿಸ್ ಹಾಫಿಲ್ ಶೌಕತ್ ಅಲಿ ಅಮಾನಿ, ಹಿದಾಯತುಲ್ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ಸಮದ್ ಹಾಜಿ, ಅಬ್ದುಲ್ ರಶೀದ್, ಹೆಚ್.ಐ ಕಮಿಟಿ ಕಾರ್ಯದರ್ಶಿ ಎಸ್.ಯು. ಇಬ್ರಾಹಿಂ, ನಿರ್ದೇಶಕರಾದ ಮಹಮ್ಮದ್ ಜಟ್ಟಿಪ್ಪಳ್ಳ, ಸಿ. ಎಂ. ಉಸ್ಮಾನ್, ಮೊಗರ್ಪಣೆ ಸದರ್ ಮುಲ್ಲಿಂ ಎನ್.ಐ.ಎಂ ಕೆ.ಯು.ಮುಹಮ್ಮದ್ ಸಖಾಫಿ ಅಲ್ ಹಿಕಮಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ