ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ವತಿಯಿಂದ ಇತ್ತೀಚೆಗೆ ಅಕಾಲಿಕ ವಾಗಿ ನಿಧನ ಹೊಂದಿದ ಬಿ. ಎಂ. ಮುಮ್ತಾಜ್ ಅಲಿ ಯವರಿಗೆ ಮಂಗಳೂರಿನಲ್ಲಿ ಶ್ರದ್ದಾಂಜಲಿ ಸಭೆ ಆಯೋಜಿಸಲಾಗಿತ್ತು
ಅಧ್ಯಕ್ಷತೆ ವಹಿಸಿದ ಮೂಸಬ್ಬ. ಪಿ. ಬ್ಯಾರಿ ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಮುಮ್ತಾಜ್ ಅಲಿಯವರು ಹೆಚ್ಚಿನ ಆದ್ಯತೆ ನೀಡಿದವರು, ಮೀಫ್ ಒಕ್ಕೂಟದಲ್ಲಿ, ಮಹಿಳಾ ಕಾಲೇಜು ಗಳ ಅಧ್ಯಕ್ಷರಾಗಿ, ಮದರಸ ಗಳಲ್ಲಿ ಮೌಲ್ಯಯುತ ಶಿಕ್ಷಣ ಪ್ರತಿಪಾದಿಸಿದ, ಸಮಯ ಬದ್ಧತೆ, ಕಾರ್ಯಕ್ಷಮತೆ ಮತ್ತು ಬಡವರಿಗೆ, ಸಮಾಜಕ್ಕೆ ತಮ್ಮ ಜೀವನದ ಬಹು ಬಾಗವನ್ನು ವ್ಯಯಿಸಿದ ಅಲಿಯವರ ಆದರ್ಶಗಳು ನಮಗೆ ಮಾದರಿ ಎಂದರು.
ಆನ್ ಲೈನ್ ಮೂಲಕ ಸಭೆಯಲ್ಲಿ ಜೊತೆಯಾದ ಮೀಫ್ ಗೌರವಾಧ್ಯಕ್ಷ ಉಮರ್ ಟೀಕೇ, ಗೌರವ ಸಲಹೆಗಾರ ಸಯ್ಯದ್ ಬ್ಯಾರಿ ಅಲಿ ಯವರ ವಿಯೋಗ ಅಘಾತಕಾರಿ ಎಂದರು.

ಅಲಿ ಯವರ ಸಹೋದರರುಗಳಾದ ಮೊಯಿದಿನ್ ಬಾವ, ಹನೀಫ್ ಬಾವ ಆಗಮಿಸಿ ಮಾತನಾಡಿದರು
ಉಪಾಧ್ಯಕ್ಷರುಗಳಾದ ಮುಸ್ತಫಾ ಸುಳ್ಯ, ಶಬೀಖಾಝಿ ಉಡುಪಿ, ಕೋಶಾಧಿಕಾರಿ ನಿಸಾರ್ ಕೋಸ್ಟಲ್ ಸಂತಾಪ ನಿರ್ಣಯ ಮoಡಿಸಿದರು, ಮುಮ್ತಾಜ್ ರವರ ಪುತ್ರ ಬಾಕಿರ್ ಮತ್ತು ಕುಟುಂಬಸ್ಥರು ಹಾಜರಿದ್ದರು
ಈದ್ಗಾ ಮಸೀದಿಯ ಧರ್ಮ ಗುರುಗಳಾದ ಬಶೀರ್ ಸಖಾಫಿ ದುಃವಾ ನೆರವೇರಿಸಿದರು
ಮೀಫ್ ಪದಾಧಿಕಾರಿಗಳಾದ ಮಯ್ಯದ್ದಿ ಎನ್ಎಂಪಿಟಿ , ಸಿರಾಜ್ ಮಣೆಗಾರ ಜೋಕಟ್ಟೆ, ಹೈದರ್ ಮನಷರ್ ಬೆಳ್ತಂಗಡಿ, ಅಡ್ವೋಕೇಟ್ ಫಾರೂಕ್, ಇಕ್ಬಾಲ್ ಕಾಟಿಪ್ಪಳ್ಳ, ಬಿ. ಎ ನಝಿರ್ ಕೃಷ್ಣಾಪುರ, ಸಂಶುದ್ದೀನ್ ಕ್ರೆಸoಟ್ ಕಾಪು,ಪರ್ವೀಜ್ ಅಲಿ ಗ್ರೀನ್ ವ್ಯೂ, ಅನ್ವರ್ ಹುಸೈನ್ ಗೂಡಿನ ಬಳಿ, ಮುಮ್ತಾಜ್ ಕುಟುಂಬಸ್ಥರು ಗಳಾದ ಹಾಜಿ ಉಮರಬ್ಬಏರ್ ಲೈನ್ಸ್, ಹಾಜಿ ಫಾರೂಕ್ ಏರ್ ಲೈನ್ಸ್ ಮೊದಲಾದವರು ಉಪಸ್ಥಿತರಿದ್ದರು, ಪ್ರದಾನ ಕಾರ್ಯದರ್ಶಿ ರಿಯಾಜ್ ಕಣ್ಣೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು
ಕಾರ್ಯಕ್ರಮ ಸಂಚಾಲಕ ಶಾರಿಕ್ ಕುಂಜತ್ತಬೈಲ್ ವಂದಿಸಿದರು, ವಿದ್ಯಾರ್ಥಿ ಹಿಲನ್ ಅಹ್ಮದ್ ಖಿರಾಅತ್ ನೆರವೇರಿಸಿದರು