Advertisement
ಸುಳ್ಯ: ಇಲ್ಲಿನ ಬಿ ಎಂ ಎ ಫ್ರೂಟ್ ಅಂಡ್ ವೆಜಿಟೇಬಲ್ ಸಂಸ್ಥೆಗೆ ಸೇರಿದ ಅಶೋಕ್ ಲೆಲ್ಯಾಂಡ್ ದೋಸ್ತ್ ವಾಹನ ಮಡಿಕೇರಿ ಕಡೆ ಹೋಗುತ್ತಿರುವ ಸಂದರ್ಭ ವಿರುದ್ಧ ದಿಕ್ಕಿನಿಂದ ಸುಳ್ಯದತ್ತ ಆಗಮಿಸುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ದೋಸ್ತ್ ವಾಹನ ಪಲ್ಟಿಯಾದ ಘಟನೆ ನಡೆದಿದೆ. ಈ ಘಟನೆಯಿಂದ ದೋಸ್ತ್ ವಾಹನ ಚಾಲಕನಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು, ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮಡಿಕೇರಿ ಘಾಟ್ ರಸ್ತೆಯ ತಿರುವಿನಲ್ಲಿ ಮಡಿಕೇರಿ ಕಡೆಯಿಂದ ವೇಗವಾಗಿ ಬಂದ ಕಾರು ಮತ್ತೊಂದು ವಾಹನವನ್ನು ಹಿಂದಿಕ್ಕಿ ಬರಲು ಪ್ರಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ ಎಂದು ಮಾಹಿತಿ ಬಂದಿದೆ.
Advertisement