ಕಾಸರಗೋಡು: ಕೇರಳ ಸರಕಾರಿ ಬಸ್ (ಕೆಎಸ್ಸಾರ್ಟಿಸಿ) ಬಸ್ ಹರಿದು ಸ್ಕೂಟರ್ ಸವಾರ ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ನಗರದ ಎಂ.ಜಿ. ರಸ್ತೆಯ ಹಳೆ ಬಸ್ ನಿಲ್ದಾಣ ಬಳಿ ನಡೆದಿದೆ. ಮೊಗ್ರಾಲ್ ಪುತ್ತೂರು, ಕಡವತ್ ಮೊಗರಿನ 23 ವರ್ಷ ವಯಸ್ಸಿನ ಮುಹಮ್ಮದ್ ಫಾಸಿಲ್ ತಬ್ಸೀರ್ ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಫಾಸಿಲ್ ತಬ್ಸೀರ್ ನ ಮೇಲೆ ಕೆಎಸ್ಸಾರ್ಟಿಸಿ ಬಸ್ಸಿನ ಹಿಂಬದಿ ಚಕ್ರ ಹರಿದು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಸವಾರನನ್ನು ತಕ್ಷಣ ನಗರದ ಸರಕಾರಿ ಜನರಲ್ ಆಸ್ಪತ್ರೆಗೆ ತಲಪಿಸಿದರೂ ಫಲಕಾರಿಯಾಗಲಿಲ್ಲ. ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ಕಾರಣವಾದ ಕೆಎಸ್ಸಾರ್ಟಿಸಿ ಬಸ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಶವಾಗಾರದಲ್ಲಿರಿಸಲಾಗಿದೆ. ಫಾಸಿಲ್ ತಬ್ಸೀರ್ ಮೊಗ್ರಾಲ್ ಪುತ್ತೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

https://youtu.be/5NdF7FKLWpE

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ