ಸುಳ್ಯ: ತಾಲೂಕಿನ ಜಾಲ್ಸೂರು ಗ್ರಾಮದ ಆರ್ತಾಜೆ ಎಂಬಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ಭಾಗದ ಜನರಿಗೆ ಸರಿಯಾಗಿ ನಡೆದಾಡಲು ರಸ್ತೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆ ಕೆಸುರುಮಯಗೊಂಡು ಸ್ಥಳೀಯ ಜನತೆ ಈ ಭಾಗದಲ್ಲಿ ನಡೆದಾಡಲು ಸಂಕಷ್ಟವನ್ನು ಎದುರಿಸುತ್ತಾರೆ. ಇದರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ವಿನಂತಿ ಮಾಡಿಕೊಂಡರು ರಸ್ತೆ ಅಭಿವೃದ್ಧಿಗೊಳಿಸಿಕೊಡುವ ಬಗ್ಗೆ ಯಾವುದೇ ಸ್ಪಂದನೆ ಇದುವರೆಗೂ ನೀಡಿಲ್ಲ. ಆದ್ದರಿಂದ ಸಾರ್ವಜನಿಕರು ಬೇಸತ್ತು ಮತದಾನದ ಬಹಿಷ್ಕಾರದ ಫಲಕವನ್ನು ಅಳವಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಮತದಾನ ಬಹಿಷ್ಕರದ ಬ್ಯಾನರ್ ಅಳವಡಿಸಿದ್ದು ತಮ್ಮ ಅಹವಾಲುಗಳನ್ನು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ