ಸೌದಿ ಅರೇಬಿಯಾ: ಸಂತೋಷ್ ಟ್ರೋಫಿಯ 76ನೇ ನ್ಯಾಷನಲ್ ಫುಟ್ಬಾಲ್ ಚಾಂಪಿಯನ್ಶಿಪ್ ಪಂದ್ಯಾಟವು ಮಾರ್ಚ್ 4 ರಂದು ಕಿಂಗ್ ಫಹದ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ಹಾಗೂ ಮೇಘಾಲಯ ತಂಡಗಳು ಸೆಣಸಾಡಿದವು. ಪಂದ್ಯಾಟದ 2ನೇ ನಿಮಿಷದಲ್ಲಿ ಎಂ ಸುನಿಲ್ ಕುಮಾರ್ ಕರ್ನಾಟಕ ಪರ ಗೋಲು ಬಾರಿಸಿದರು. 9 ನೇ ನಿಮಿಷದಲ್ಲಿ ಪ್ರತ್ಯುತ್ತರವಾಗಿ ಬ್ರೊಲಿಂಗ್ಟನ್ ಡಬ್ಲ್ಯೂ ಮೇಘಾಲಯ ತಂಡದ ಪರ ಗೋಲು ಬಾರಿಸಿ ಸಮಬಲಗೊಳಿಸಿದರು. ತದನಂತರ ಕರ್ನಾಟಕ ತಂಡದ ಪರವಾಗಿ 19 ನೇ ನಿಮಿಷದಲ್ಲಿ ಬೇಕಿ ಓರಮ್, 44 ನೇ ನಿಮಿಷದಲ್ಲಿ ರಾಬಿನ್ ಯಾದವ್‌ ಗೋಲು ಗಳಿಸಿ ಮುನ್ನಡೆ ಕಾಯ್ದುಕೊಂಡರು , 60 ನೇ ನಿಮಿಷದಲ್ಲಿ ಶೀನ್ ಸ್ಟೀವೆನ್ಸನ್ ಗೋಲು ಬಾರಿಸಿ 3-2 ಒಂದು ಗೋಲಿನ‌ ಅಂತರದ ಮೂಲಕ ಮೇಘಾಲಯ ತಂಡ ಸೋಲುಂಡಿತು. ಬರೋಬ್ಬರಿ 54 ವರ್ಷಗಳ ಬಳಿಕ ಕರ್ನಾಟಕ ತಂಡ ಈ ಒಂದು ಚಾಂಪಿಯನ್ಷಿಪ್ ತನ್ನದಾಗಿಸಿಕೊಂಡಿದ್ದು ಫುಟ್ಬಾಲ್ ಕ್ಷೇತ್ರದಲ್ಲಿ ಕರ್ನಾಟಕ ‌ತಂಡ ಮತ್ತೊಂದು ಸಾಧನೆ ಮಾಡಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ