Advertisement
ರಾಷ್ಟ್ರೀಯ ತಂಡ ಮೊರಾಕೊ ಹಾಗೂ ಕ್ಲಬ್ ತಂಡವಾದ ಪಿ.ಎಸ್.ಜಿ ತಂಡದ ಸ್ಟಾರ್ ಫುಟ್ಬಾಲ್ ಡಿಫೆಂಡರ್ ಆಟಗಾರ ಅಶ್ರಫ್ ಹಕಿಮಿ ವಿರುದ್ಧ ಯುವತಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿದ್ದಾರೆ. ಈ ವಿಚಾರವನ್ನು ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.23 ವರ್ಷದ ಯುವತಿ ಅಶ್ರಫ್ ಹಕಿಮಿ ಮೇಲೆ ಅತ್ಯಾಚಾರದ ಆರೋಪದ ಕೇಸು ದಾಖಲಿಸಿದ್ದಳು. ಆರೋಪಕ್ಕೆ ಸಂಬಂಧಿಸಿ ಹಕಿಮಿ ಅವರನ್ನು ಪ್ರಾಸಿಕ್ಯೂಟರ್‌ಗಳು ಗುರುವಾರ ವಿಚಾರಣೆ ನಡೆಸಿದ್ದಾರೆ. ಇದಾದ ಬಳಿಕ ಹಕಿಮಿ ವಿರುದ್ಧ ಪ್ರಾಥಮಿಕ ಹಂತದ ಕೇಸು ದಾಖಲಿಸಿಲಾಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಕತಾರ್ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಮೊರೊಕ್ಕೊ ತಂಡ ಶ್ರೇಷ್ಠ ಪ್ರದರ್ಶನ ತೋರಿ ಸೆಮಿ ಫೈನಲ್ ತಲುಪುವಲ್ಲಿ ಹಕಿಮಿ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಅತ್ಯಾಚಾರದ ಆರೋಪದ ಬಗ್ಗೆ ಹಕಿಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement