ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಬೆಂಗಳೂರು ಎಫ್.ಸಿ ರೋಚಕ ಗೆಲುವು ಸಾಧಿಸಿ, ಈ ಮೂಲಕ (ISL) ಇಂಡಿಯನ್ ಸೂಪರ್ ಲೀಗ್‌ನಲ್ಲಿ ಫೈನಲ್ ತಲುಪಿದೆ. ಮುಂಬೈನಲ್ಲಿ ನಡೆದಿದ್ದ ಸೆಮಿಫೈನಲ್‌ನ ಮೊದಲ ಲೆಗ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಮುಂಬೈ ಸಿಟಿ ಎಫ್‌ಸಿ ವಿರುದ್ಧ 1-0 ಗೋಲುಗಳ ಜಯ ಸಾಧಿಸಿತ್ತು. ಭಾನುವಾರ ಬೆಂಗಳೂರಿನಲ್ಲಿ ನಡೆದ ಎರಡನೇ ಲೆಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 2-1 ಗೋಲುಗಳ ಜಯ ಸಾಧಿಸಿತು. ಪಂದ್ಯ ಆರಂಭವಾದ 22ನೇ ನಿಮಿಷದಲ್ಲೇ ಬೆಂಗಳೂರು ಎಫ್‌ಸಿ ಪರ ಜಾವಿ ಹೆರ್ನಾಂಡ್ರೆಜ್ ಮೊದಲ ಗೋಲುಗಳಿಸಿದರು. ಮುಂಬೈ ಸಿಟಿ ಎಫ್‌ಸಿ 30ನೇ ನಿಮಿಷದಲ್ಲೇ ಗೋಲುಗಳಿಸುವ ಮೂಲಕ ತಿರುಗೇಟು ನೀಡಿತು. ನಂತರ ಪಂದ್ಯದ 66ನೇ ನಿಮಿಷದಲ್ಲಿ ಮುಂಬೈ ಎರಡನೇ ಗೋಲು ದಾಖಲಿಸಿ ಮುನ್ನಡೆ ಪಡೆದುಕೊಂಡಿತು. ಆದರೂ ಮುಂಬೈ ಎಫ್‌ಸಿ ಫೈನಲ್‌ಗೆ ಪ್ರವೇಶಿಸಬೇಕಾದರೆ ಇನ್ನೊಂದು ಗೋಲು ದಾಖಲಿಸಬೇಕಾದ ಕಾರಣ ಹೆಚ್ಚುವರಿ 30 ನಿಮಿಷ ನೀಡಲಾಯಿತು. ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ 1-0 ಅಂತರದಲ್ಲಿ ಗೆದ್ದಿದ್ದ ಕಾರಣ, ಅಗ್ರಿಗೇಟ್ ಪ್ರಕಾರ ಸ್ಕೋರ್ ಸಮಬಲವಾಗಿತ್ತು. ಹೆಚ್ಚುವರಿ ಸಮಯ ನೀಡಿದರೂ ಎರಡೂ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದ ಕಾರಣ (ಟೈ ಬ್ರೇಕರ್) ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಣಯಿಸಲು ತೀರ್ಮಾನಿಸಲಾಯಿತು. ಮೊದಲ 5 ಸೆಟ್‌ಗಳಲ್ಲಿ ಎರಡೂ ತಂಡಗಳು 5 ಪೆನಾಲ್ಟಿ ಶೂಟೌಟ್ ಗಳಿಸಿ ಪಂದ್ಯಕ್ಕೆ ಮತ್ತಷ್ಟು ರೋಚಕತೆ ಸೃಷ್ಟಿಸಿತು. ತದನಂತರ ಎರಡನೇ ಸೆಟ್ ಶೂಟೌಟ್‌ಗೆ ಪಂದ್ಯ ಮುನ್ನಡೆಯಿತು. ಮುಂಬೈ ಸಿಟಿ ಎಫ್‌ಸಿ 8 ಮತ್ತು ಬೆಂಗಳೂರು ಎಫ್‌ಸಿ 8 ಪೆನಾಲ್ಟಿ ಶೂಟೌಟ್ ಗಳಿಸಿ ಸಮನಾಗಿತ್ತು. ನಂತರ ಬೆಂಗಳೂರು ಎಫ್‌ಸಿ ಯಶಸ್ವಿಯಾಗಿ 9ನೇ ಶೂಟೌಟ್ ದಾಖಲಿಸಿತು. ಬೆಂಗಳೂರು ಎಫ್‌ಸಿ ತಂಡದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಮುಂಬೈ ಎಫ್‌ಸಿಯ 9ನೇ ಶೂಟೌಟ್ ತಡೆಯುವಲ್ಲಿ ಯಶಸ್ವಿಯಾದರು. ಕಂಠೀರವ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಒಮ್ಮೆಲೆ ಜೋರಾಗಿ ಕೂಗುವ ಮೂಲಕ ತಂಡದ ಜಯವನ್ನು ಸಂಭ್ರಮಿಸಿದರು. ಈ ರೋಚಕ ಜಯದ ಮೂಲಕ ಬೆಂಗಳೂರು ಎಫ್‌ಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಮಾರ್ಚ್ 18 ಶನಿವಾರದಂದು ನಡೆಯಲಿರುವ ಫೈನಲ್‌ನಲ್ಲಿ ಹೈದರಾಬಾದ್ ಎಫ್‌ಸಿ ವಿರುದ್ಧ ಸೆಣೆಸಲಿದ್ದಾರೆ.
ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಒಂದು ಹಂತದಲ್ಲಿ ಕ್ವಾಲಿಫೈಯರ್ ಹಂತಕ್ಕೆ ತಲುಪಲು ಕಷ್ಟಪಡಿತ್ತಿದ್ದ ಬೆಂಗಳೂರು ಎಫ್‌ಸಿ ನಂತರ ಸತತವಾಗಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಮುಂಬೈ ಎಫ್‌ಸಿ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ.