ಸುಳ್ಯ: ರಕ್ತದಾನ ಮಾಸಾಚರಣೆಯ ಅಂಗವಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಸುಳ್ಯ ವಿಧಾನಸಭಾ ಕ್ಷೇತ್ರದ ರೂರಲ್ ಬ್ಲಾಕ್ ಮತ್ತು ನಗರ ಸಮಿತಿಯು ರೋಟರಿ ಕ್ಯಾಂಪ್ಕೋ ರಕ್ತ ನಿಧಿ ಪುತ್ತೂರು ಇದರ ಸಹಯೋಗದೊಂದಿಗೆ ಸುಳ್ಯದ ಗುರುಂಪು ಎಂಬಲ್ಲಿ ಬೃಹತ್ ರಕ್ತದಾನ ಶಿಬಿರವು ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಅಬ್ದುಲ್ ಕಲಾಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಎಸ್‌ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ನೆರವೇರಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡಿ ರಕ್ತದಾನದ ಅವಶ್ಯಕತೆ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಗಾಂಧಿನಗರ ಇದರ ಕಾರ್ಯದರ್ಶಿ ಕೆ.ಬಿ ಅಬ್ದುಲ್ ಮಜೀದ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಒಟ್ಟು 46 ಯುನಿಟ್ ರಕ್ತ ಸಂಗ್ರಹವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ನ ವೈಧ್ಯಾದಿಕಾರಿ ಡಾ|ಸಿ.ರಾಮಚಂದ್ರ ಭಟ್, ಜಮೀಯತುಲ್ ಫಲಾಹ್ ಸುಳ್ಯ ಇದರ ನಿರ್ದೇಶಕರಾದ ಸಿದ್ದೀಕ್ ಕಟ್ಟೆಕಾರ್, ಪೀಸ್ ಸ್ಕೂಲ್ ಬೊಳುಬೈಲ್ ಇದರ ಉಪಾಧ್ಯಕ್ಷರಾದ ಸಂಶುದ್ದೀನ್, ಸವಣೂರು ಗ್ರಾಮ ಪಂಚಾಯತಿ ಸದಸ್ಯರುಗಳಾದ ರಝಾಕ್ ಕೆನರಾ, ರಫೀಕ್ ಎಂ.ಎ, SDTU ಸುಳ್ಯ ತಾಲ್ಲೂಕು ಅಧ್ಯಕ್ಷ ಉಸ್ಮಾನ್ ಅರಂತೋಡು, ಎಸ್‌ಡಿಪಿಐ ಸುಳ್ಯ ನಗರಾಧ್ಯಕ್ಷ ಮೀರಝ್ ಸುಳ್ಯ ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ರಕ್ತದಾನಿಗಳು ಭಾಗವಹಿಸಿದ್ದರು.

Advertisement
Advertisement