Advertisement

ಮಾ 18, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರತ್ಯೇಕ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದಿಳಿದ ಪ್ರಯಾಣಿಕರಿಂದ ಅಕ್ರಮವಾಗಿ ಸಾಗಿಸುತ್ತಿದ್ದ ₹90 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.‌ ಒಟ್ಟು ಮೂವರು ಪ್ರಯಾಣಿಕರಿಂದ ಮಾರ್ಚ್ 1 ರಿಂದ ಮಾರ್ಚ್ 15 ರ ಅವಧಿಯಲ್ಲಿ, ಅಧಿಕಾರಿಗಳು ₹ 90 ಲಕ್ಷದ 67 ಸಾವಿರದ 750, ಮೌಲ್ಯದ 1,606 ಗ್ರಾಂ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ವಿವಿಧ ವಿಧಾನಗಳಲ್ಲಿ ಪೇಸ್ಟ್ ರೂಪದಲ್ಲಿ ಮರೆಮಾಡಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. 21 ತಿಂಗಳ ಹೆಣ್ಣು ಮಗುವಿನ ಡೈಪರ್ ನಲ್ಲಿ ತಂದೆ ಚಿನ್ನವನ್ನು ಮರೆಮಾಚಿ ಡೈಪರ್ ಗೆ ತೊಡಿಸಿ ಅದರಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಪೌಚ್ ನಲ್ಲಿ ಇರಿಸಿದ್ದ. ಮತ್ತೋರ್ವ ಗುದ ನಾಳದಲ್ಲಿ ಮಾತ್ರೆಗಳ ರೂಪದಲ್ಲಿ ಬಚ್ಚಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ. ಟ್ರಾಸರ್ ನ ಸೊಂಟ ಪಟ್ಟಿಯಲ್ಲಿ ಚಿನ್ನ ಅಡಗಿಸಿಟ್ಟು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು‌ ಬಂದಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ