Advertisement
ಸುಳ್ಯ: ನಿನ್ನೆ ಬೆಳ್ಳಂಬೆಳಗ್ಗೆ ಕುರುಂಜಿಗುಡ್ಡೆ ಪರಿಸರದಿಂದ ಸುಳ್ಯ ಪೊಲೀಸರು ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಸುಳ್ಯ ಪೋಲಿಸರು ಬಂಧಿಸಿದ್ದರು. ಬಂಧಿತ ಆರೋಪಿ ಕಬೀರ್ ಎಸ್ ಎ (36. ವ) ಎಂದು ತಿಳಿದುಬಂದಿದ್ದು, ಈತ ಸುಳ್ಯ ನಗರದ ಬೆಟ್ಟಂಪಾಡಿ ನಿವಾಸಿ, ಆರೋಪಿಯಿಂದ ವಶಪಡಿಸಿಕೊಂಡ ಮಾದಕ ವಸ್ತು MDMA 44.ಗ್ರಾಂ ತೂಕವುಳ್ಳದ್ದಾಗಿದ್ದು, ₹1,32,000 ಎಂದು ಅಂದಾಜಿಸಲಾಗಿದೆ ಎಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ. ಇದರೊಂದಿಗೆ ಆರೋಪಿಯಿಂದ 2 ಮೊಬೈಲ್ ಫೋನ್ ಗಳು ಒಂದು ಕಾರು, ಒಂದು ತೂಕ ಮಾಪಕವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈತನ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Advertisement