Advertisement

ಸುಳ್ಯ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಮಸ್ಜಿದ್ ಹಾಜರ ಹಸನ್ ವಠಾರ (ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ) ಹೊಸ ಮತದಾರರ ನೋಂದಾವಣೆ ಮತ್ತು ತಿದ್ದುಪಡಿ ಶಿಬಿರವು ಮಾರ್ಚ್ 21 ಮಂಗಳವಾರದಂದು ನಡೆಯಲಿದೆ. ಹೊಸ ಮತದಾರರ ನೋಂದಾವಣೆ ಮತ್ತು ತಿದ್ದುಪಡಿ, ಹೆಸರು, ವಿಳಾಸ ಬದಲಾವಣೆ, ಆಧಾರ್ ಕಾರ್ಡ್ ಜೋಡಣೆ, ಭಾವಚಿತ್ರ ಬದಲಾವಣೆ, ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಎಂಬ ಪರಿಶೀಲನೆ ಮುಂತಾದ ವಿಷಯಗಳ ಬಗ್ಗೆ ಶಿಬಿರವು ನಡೆಯಲಿದೆ. ಶಿಬಿರವು ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ನಡೆಯಲಿರುವುದು. ಇದಕ್ಕಾಗಿ ಪೂರಕ ದಾಖಲೆಗಳಾದ ಆಧಾರ್ ಕಾರ್ಡ್ ನ ಮೂಲ ಪ್ರತಿ, ಪಾಸ್ಪೋರ್ಟ್ ಸೈಜ್ ಫೋಟೋ, ಜನನ ಪ್ರಮಾಣ ಪತ್ರ, ಪಡಿತರ ಚೀಟಿಯ ಮೂಲ ಪ್ರತಿಯನ್ನು ತರಬೇಕು. ಪ್ರಸ್ತುತ ಶಿಬಿರದ ಸದುಪಯೋಗವನ್ನು ಸಾರ್ವಜನಿಕರು ಮಾಡಿಕೊಳ್ಳಬೇಕಾಗಿ ಸಂಘಟಕರು ಕೇಳಿಕೊಂಡಿದ್ದಾರೆ.

Advertisement