Advertisement
ಸುಳ್ಯ: ನಗರದಾದ್ಯಂತ ತಂಬಾಕು ಮತ್ತು ಗುಟುಕಾ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಪೋಲೀಸ್ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಶಾಲೆ ಮತ್ತು ಕಾಲೇಜು ವಠಾರದಲ್ಲಿ ಸಿಗರೇಟ್ ಮತ್ತು ಗುಟುಕಾ ಮಾರಾಟ ಮಾಡುತ್ತಿದ್ದನ್ನು ತಿಳಿದು ಪೋಲೀಸ್ ಇಲಾಖೆ ದಾಳಿ ಸಂಘಟಿಸಿದೆ ಎಂದು ತಿಳಿದು ಬಂದಿದೆ

ಸುಳ್ಯ ಕೆ ವಿ ಜಿ ಜಂಕ್ಷನ್, ಜ್ಯೋತಿಸರ್ಕಲ್ , ಜಟ್ಟಿಪಳ್ಳ, ಗಾಂಧಿನಗರ, ಪೈಚಾರ್ ಸೇರಿದಂತೆ ನಗರದ ಹಲವೆಡೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಅನೇಕ ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಕಂಡು ಬಂದಿದ್ದು ಅವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
Advertisement