“ಅಸಿಸ್ಟ್ ಕಿಂಗ್” ಎಂದೇ ಖ್ಯಾತಿ ಪಡೆದಿರುವ ಮೆಸುಟ್ ಓಝಿಲ್ ತನ್ನ ವೃತ್ತಿ ಜೀವನದ ಎಲ್ಲಾ ಮಾದರಿಯ ಫುಟ್ಬಾಲ್ ಪಂದ್ಯಾಟಕ್ಕೆ ವಿದಾಯ ಹೇಳಿದ್ದಾರೆ. ಹಠಾತ್ತಾನೇ ನೀಡಿದ ಈ ವಿದಾಯದಿಂದ ಫುಟ್ಬಾಲ್ ಲೋಕ ಶೋಕ ಸಾಗರದಲ್ಲಿ ಮುಳುಗಿದೆ. ತನ್ನ 34 ನೇ ವಯಸ್ಸಿನಲ್ಲಿ ಫುಟ್‌ಬಾಲ್‌ನಿಂದ ನಿವೃತ್ತಿಯಾಗಿದ್ದಾರೆ ಒಝಿಲ್, ವಿಶ್ವದ ಶ್ರೇಷ್ಠ ಮಟ್ಟದ ತಂಡವಾದ, ರಿಯಲ್ ಮಾಡ್ರಿಡ್, ಆರ್ಸೆನಲ್ ಮಿಡ್‌ಫೀಲ್ಡರ್, ಹಾಗೂ ಅಂತರರಾಷ್ಟ್ರೀಯ ತಂಡವಾದ ಜರ್ಮನಿಯಲ್ಲಿ ಆಡಿದ ಅನುಭವ ಈ ಆಟಗಾರನಿಗಿದೆ.

ಪ್ರಸ್ತುತ ಟರ್ಕಿಯ ‘ಇಸ್ತಾನ್‌ಬುಲ್ ಬಸಕ್ಸೆಹಿರ್‌’ ಪರ ಆಡುತ್ತಿದ್ದರು ಆದರೆ ಗಾಯದ ಸಮಸ್ಯೆಗಳಿಂದ ಕ್ಲಬ್‌ಗಾಗಿ ಕೇವಲ ಎಂಟು ಪಂದ್ಯಗಳನ್ನು ಮಾತ್ರ ಆಡಿದ್ದರು. ಓಜಿಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ‘ಎಲ್ಲರಿಗೂ ನಮಸ್ಕಾರ, ಚಿಂತನಶೀಲ ಪರಿಗಣನೆಯ ನಂತರ, ನಾನು ವೃತ್ತಿಪರ ಫುಟ್‌ಬಾಲ್‌ನಿಂದ ನನ್ನ ತಕ್ಷಣದ ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ. ನಾನು ಈಗ ಸುಮಾರು 17 ವರ್ಷಗಳಿಂದ ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಆಡಿದ್ದೇನೆ, ಈ ಅವಕಾಶಗಳಿಗಾಗಿ ಕೃತಜ್ಞನಾಗಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ, ಕೆಲವು ಗಾಯಗಳ ನೋವಿನಿಂದ ಫುಟ್‌ಬಾಲ್‌ನಿಂದ ನಿವೃತ್ತಿ ಹೊಂದುವ ಸಮಯವಾಗಿದೆ ಎಂಬುದು ಹೆಚ್ಚು ಹೆಚ್ಚು ಸ್ಪಷ್ಟವಾಗಿದೆ.


ರಿಯಲ್ ಮ್ಯಾಡ್ರಿಡ್‌ನಿಂದ £ 42.5 ಮಿಲಿಯನ್‌ಗೆ ಸಹಿ ಹಾಕಿದ ನಂತರ ನಾಲ್ಕು FA ಕಪ್‌ಗಳನ್ನು ಗೆದ್ದರು. ಅದೇ ರೀತಿ ಜರ್ಮನಿ ತಂಡದಲ್ಲಿ ವಿಶ್ವ ಕಪ್ ಕೂಡಾ ಗೆದ್ದುಕೊಂಡಿತು. “ಇದು ಮರೆಯಲಾಗದ ಕ್ಷಣಗಳು ಮತ್ತು ಭಾವನೆಗಳಿಂದ ಕೂಡಿದ ಅದ್ಭುತ ಪ್ರಯಾಣವಾಗಿದೆ” ಎಂದು ಅವರು ಹೇಳಿದರು. ನನ್ನನ್ನು ಬೆಂಬಲಿಸಿದ ತರಬೇತುದಾರರು ಮತ್ತು ಸ್ನೇಹಿತರು ತಂಡದ ಸಹ ಆಟಗಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ‘ನನ್ನ ಕುಟುಂಬ ಸದಸ್ಯರಿಗೆ ಮತ್ತು ನನ್ನ ಆತ್ಮೀಯ ಸ್ನೇಹಿತರಿಗೆ ವಿಶೇಷ ಧನ್ಯವಾದಗಳು. ಅವರು ಮೊದಲ ದಿನದಿಂದ ನನ್ನ ಪ್ರಯಾಣದ ಭಾಗವಾಗಿದ್ದಾರೆ ಮತ್ತು ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯದಲ್ಲಿ ನನಗೆ ತುಂಬಾ ಪ್ರೀತಿ ಮತ್ತು ಬೆಂಬಲವನ್ನು ನೀಡಿದ್ದಾರೆ. ನಾನು ಯಾವ ಕ್ಲಬ್ ಅನ್ನು ಪ್ರತಿನಿಧಿಸುತ್ತಿದ್ದರೂ ನನಗೆ ತುಂಬಾ ಪ್ರೀತಿಯನ್ನು ತೋರಿದ ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ