Advertisement
ಸುಳ್ಯದ ಗುರುಂಪು ಬಳಿ ಬರೆ ಜರಿದು ಮೂವರು ಮಣ್ಣಿನಡಿ ಸಿಲುಕಿದ್ದು, ಇದರಲ್ಲಿ (ಒಬ್ಬಳು ಯುವತಿ ಹಾಗೂ ಒಬ್ಬ ಯುವಕ) ಇಬ್ಬರನ್ನು ಮಣ್ಣಿನಡಿಯಿಂದ ಹೊರ ತೆಗೆಯಲಾಗಿದ್ದು ಇನ್ನುಳಿದ ಒಬ್ಬರ ರಕ್ಷಣಾ ಕಾರ್ಯ ಮುಂದುವರೆದಿದೆ. ಮನೆಯ ಹಿಂದುಗಡೆ ಬರೆಯಿದ್ದು, ಇದರ ಸಮೀಪ ಪಿಲ್ಲರ್ ನಿರ್ಮಿಸುವ ಕಾಮಗಾರಿ ನಡೆಯುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆಂದು ತಿಳಿದುಬಂದಿದೆ. ಜೆಸಿಬಿಯಿಂದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಸರಿಸುಮಾರು ಇಂದು ಮಧ್ಯಾಹ್ನ 12:45 ರ ವೇಳೆ ಈ ಘಟನೆ ಸಂಭವಿಸಿದೆ.

Advertisement