Advertisement
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಭಾನುವಾರ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ ಅದ್ಧೂರಿಯಾಗಿ ನಡೆಯಿತು. ದಿಗ್ಗಜ ಆರ್ಸಿಬಿ ತಂಡದ ಮಾಜಿ ಆಟಗಾರರಾದ ಗೇಲ್ ಹಾಗೂ ಎಬಿಡಿಗೆ ‘ಹಾಲ್ ಆಫ್ ಫೇಮ್’ ಗೌರವ ಸಮರ್ಪಿಸಲಾಯ್ತು. ಅಲ್ಲದೆ ಈ ಬಾರಿಯ ಐಪಿಎಲ್‌ಗೆ ಆರ್’ಸಿಬಿ ತಂಡದ ಹೊಸ ಜೆರ್ಸಿ ಅನಾವರಣಗೊಳಿಸಲಾಯ್ತು. ಫುಟ್ಬಾಲ್ ಇನ್ನಿತರ ಹಲವು ಕ್ರೀಡೆಗಳಲ್ಲಿ ಪ್ರತಿಷ್ಠಿತ ತಂಡಕ್ಕೆ ಪ್ರಾಯೋಜಕತ್ವವನ್ನು ನೀಡುತ್ತಿರುವ ವಾಯುಸಾರಿಗೆಯ ದೈತ್ಯ ಸಂಸ್ಥೆಗಳಲ್ಲಿ ಒಂದಾದ ‘ ಕತ್ತಾರ್ ಏರ್ವೇಸ್’ ಈ ಬಾರಿಯ ಆರ್’ಸಿಬಿ ತಂಡದ ಜರ್ಸಿ ಈ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಮೂಲಗಳ ಪ್ರಕಾರ ₹75 ಕೋಟಿಗೆ ಈ ಒಪ್ಪಂದ ಸಹಿ ಹಾಕಿದೆ ಎಂದು ತಿಳಿದು ಬಂದಿದೆ. ಅದೇ ರೀತಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ನಲ್ಲಿ ಬರೋಬ್ಬರಿ 1 ಕೋಟಿ ಫಾಲವರ್ಸನ್ನು ಆರ್’ಸಿಬಿ ತಂಡದ ಖಾತೆ ಪಡೆದುಕೊಂಡಿದೆ.

Advertisement