ಕಲ್ಲುಗುಂಡಿ: ಉಪ್ಪು, ಮಣ್ಣಿನ ಮಡಿಕೆ ಇವುಗಳನ್ನೆಲ್ಲ ರಸ್ತೆ ಬದಿಯಲ್ಲಿ, ತೆರೆದ ಜಾಗಗಳಲ್ಲಿ ಮಾರುವುದು ರೂಢಿ, ಆದರೆ ಈಗ ಕಳ್ಳರು ಅದನ್ನೇ ಎಗರಿಸಿರುವ ಘಟನೆ ನಡೆದಿದೆ.
ಹೌದು ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿನ ಹೋಟೆಲ್ ಒಂದರಿಂದ ಸರಿಸುಮಾರು ₹25,000 ಬೆಲೆಬಾಳುವ ಮಣ್ಣಿನ ಮಡಿಕೆಗಳನ್ನ ತಡ ರಾತ್ರಿ ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಹೊಟ್ಟೆಪಾಡಿಗಾಗಿ ಮಹಿಳೆಯೊಬ್ಬರು ನಡೆಸುತ್ತಿದ್ದ ಹೋಟೆಲ್ ನಿಂದ ಕಿಡಿಗೇಡಿಗಳು ಈ ಮಡಿಕೆಗಳನ್ನು ಎಗರಿಸಿದ್ದಾರೆ.