Advertisement

ಕಡಬ: ದೈವನರ್ತನದ ವೇಳೆಯೇ, ದೈವ ನರ್ತಕರೊಬ್ಬರು ಕುಸಿದು ಬಿದ್ದು ತಮ್ಮ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಕಾಂತು ಅಜಿಲ ಮೂಲಂಗೀರಿ ಎಂಬುವವರೇ ಮೃತ ದುರ್ದೈವಿಯಾಗಿದ್ದು, ಮೂಲಂಗೀರಿ ಅವರ ನಿಧನಕ್ಕೆ ಹೃದಯಾಘಾತ ಕಾರಣ ಎಂದು ಹೇಳಲಾಗಿದೆ. ಕಡಬ ಸಮೀಪದ ಎಡಮಂಗಲ ಗ್ರಾಮದ ಇಡ್ಯಕ್ಕದಲ್ಲಿ ನೇಮೋತ್ಸವ ನಡೆಯುತ್ತಿತ್ತು. ಈ ವೇಳೆ ಕಾಂತು ಅಜಿಲ ಅವರು ದೈವನರ್ತನ ಸೇವೆ ನೀಡುತ್ತಿದ್ದರು. ದೈವನರ್ತನ ಮಾಡುತ್ತಲೇ ಹಠಾತ್ತನೇ ಕುಸಿದು ಬಿದ್ದ ಕಾಮತು ಅಜಿಲ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತದಾರೂ, ಚಿಕಿತ್ಸೆ ಫಲಕಾರಿಯಗದೇ ಅವರು ಅಸುನೀಗಿದ್ದಾರೆ ಎನ್ನಲಾಗಿದೆ.

55 ವರ್ಷದ ಕಾಂತು ಅಂಜಿಲ ಅವರು ದೈವನರ್ತನಕ್ಕೆ ಹೆಸರುವಾಸಿಯಾಗಿದ್ದರು. ಹಲವು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಕಾಂತು ಅಂಜಿಲ ಅವರು ದೈವಾರಾಧಕರಾಗಿ ಮತ್ತು ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾ.30ರ ಮಧ್ಯರಾತ್ರಿ ನಡೆದ ನೇಮೋತ್ಸವದಲ್ಲಿ ದೈವನರ್ತನ ಸೇವೆ ನೀಡುತ್ತಿದ್ದ ಕಾಂತು ಅಂಜಿಲ ಅವರು, ಹಠಾತ್ತನೇ ಕುಸಿದು ಬಿದ್ದ ದೃಶ್ಯಗಳು ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ನಡೆದಾಗ ಕಾಂತು ಅಂಜಿಲ ಅವರು ಶಿರಾಡಿ ದೈವಕ್ಕೆ ನರ್ತನ ಸೇವೆ ನೀಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಂಜಿ ಅವರ ನಿಧನಕ್ಕೆ ಹೃದಯಾಘಾತ ಕಾರಣ ಎಂದು ಹೇಳಲಾಗುತ್ತಿದ್ದರೂ, ವೈದ್ಯರು ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ