ಸುಳ್ಯ: ಬೆಳೆಯುತ್ತಿರುವ ಸುಳ್ಯ ಕ್ಕೆ ಮತ್ತೊಂದು ಗರಿಯನ್ನು ಕೆವಿಜಿ ಕ್ಯಾಂಪಸ್ ಬಳಿ ‘ಕ್ಯೂ ಕ್ಲಬ್ ದಿ ಗೇಮರ್ಸ್ ಕೆಫೆ’ ತಂದಿದೆ. ಈ ಗೇಮಿಂಗ್ ಸಂಸ್ಥೆಯು ಮಾ.31, ಶುಕ್ರವಾರ ದಂದು ಶುಭಾರಂಭಗೊಡಿತು.


ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಒಂದೇ ಸೂರಿನಡಿಯಲ್ಲಿ ಮನರಂಜನಾ ಕ್ರೀಡೆಗಳಾದ ಸ್ನೂಕರ್‌, ಬಿಲ್ಲಿಯಾರ್ಡ್ಸ್, ಕ್ಯಾರಂ, ಪುಶ್ಬಾಲ್, ಟೇಬಲ್ ಟೆನ್ನಿಸ್, ಚೆಸ್ ಹಾಗೂ ಇನ್ನಿತರ ಐವತ್ತಕ್ಕೂ ಹೆಚ್ಚು ಬೋರ್ಡ್ ಗೇಮ್ಸ್ ಗಳನ್ನೊಳಗೊಂಡ ವಿಶಾಲವಾದ ಒಳಾಂಗಣ ಗೇಮಿಂಗ್ ಸೆಂಟರ್ ಪ್ರಾರಂಭಗೊಂಡಿತು.

ಇದರ ಉದ್ಘಾಟನೆಯನ್ನು ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್ ಎ ರಾಮಚಂದ್ರ ಉದ್ಘಾಟಿಸಿದರು. ಸ್ನೂಕರ್‌ ಬೋರ್ಡ್ ಏರಿಯಾವನ್ನು ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಉದ್ಘಾಟಿಸಿದರು. ಸ್ನೂಕರ್‌ ಬೋರ್ಡ್ ನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರುದತ್ ನಾಯಕ್ ಉದ್ಘಾಟಿಸಿದರು. ಕೆಫೆಯನ್ನು ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡರು ಉದ್ಘಾಟಿಸಿದರು. ಒಟ್ಟಿನಲ್ಲಿ ಬಿಡುವಿನ ವೇಳೆಯಲ್ಲಿ ಸಮಯ ಕಳೆಯುವ ಬೆಸ್ಟ್ ಸ್ಪಾಟ್ ಇದಾಗಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ