[ad_1]
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಟಾಸ್ ಗೆದ್ದ ದೆಹಲಿ ಕ್ಯಾಪಿಟಲ್ಸ್ (LSG vs DC) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಮೂರನೇ ಪಂದ್ಯ ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Ekana Sports City) ನಡೆಯಿತು. ಗಾಯಗೊಂಡಿರುವ ಪಂತ್ ಬದಲಿಗೆ ಡೇವಿಡ್ ವಾರ್ನರ್ ಡೆಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಡೆಲ್ಲಿಗೆ 194 ರನ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸುವ ಮೂಲಕ 50 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಲಕ್ನೋ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಇನ್ನು, ಲಕ್ನೋ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲನ್ನಪ್ಪಿತು. ಡೆಲ್ಲಿ ಪರ ನಾಯಕ ಡೇವಿಡ್ ವಾರ್ನರ್ ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ವಾರ್ನರ್ 48 ಎಸೆತದಲ್ಲಿ 7 ಫೋರ್ ಮೂಲಕ 56 ರನ್ ಗಳಿಸಿದರು. ಉಳಿದಂತೆ ಪೃಥ್ವಿ ಶಾ 12 ರನ್, ಮಿಚೆಲ್ ಮಾರ್ಷ್ ಶೂನ್ಯ, ಸರ್ಫರಾಜ್ ಖಾನ್ 4 ರನ್, ರಿಲೇ ರೂಸೋ 30 ರನ್, ರೋಮನ್ ಪೊವೆಲ್ 1 ರನ್, ಅಮನ್ ಹಕೀಮ್ ಖಾನ್ 4 ರನ್, ಕುಲ್ದೀಪ್ ಯಾದವ್ 6 ರನ್ ರನ್ ಮತ್ತು ಅಕ್ಷರ್ ಪಟೇಲ್ 16 ರನ್, ಚೇತನ್ ಸಕಾರಿಯಾ 4 ರನ್ ಗಳಿಸಿದರು. ಬ್ಯಾಟಿಂಗ್ನಲ್ಲಿ ಮಿಂಚಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಬಳಿಕ ಬೌಲಿಂಗ್ನಲ್ಲಿಯೂ ಉತ್ತಮ ಪ್ರದರ್ಶನ ನೀಡಿತು. ಲಕ್ನೋ ಪರ ಮಾರ್ಕ್ ವುಡ್ 4 ಓವರ್ ಮಾಡಿ ಪ್ರಮುಖ 5 ವಿಕೆಟ್ ಪಡೆದರು. ಉಳಿದಂತೆ ಆವೇಶ್ ಖಾನ್ ಮತ್ತು ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
[ad_2]
Source link