[ad_1]
ಬ್ರೆಜಿಲ್ ಫುಟ್ಬಾಲ್ ತಾರೆ ನೇಮರ್ ಜೂನಿಯರ್, ಆನ್‌ಲೈನ್ ಪೋಕರ್ ಆಟವಾಡಿ ಹಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಜೂನಿಯರ್ ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಆಡುತ್ತಿರುವ ಸಾಕರ್ ಹೀರೋ, ಆನ್‌ಲೈನ್ನಲ್ಲಿ ಇಸ್ಪಿಟ್ ಆಡಿ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ. ಪೋಕರ್ (ಇಸ್ಪೀಟ್) ಆಟದ (Poker Game) ಮೋಜಿನಿಂದಾಗಿ ಸಾವಿರಾರು ಕುಟುಂಬಗಳು ನಿರಾಶ್ರಿತವಾಗಿವೆ. ಇದೇ ಕಾರಣಕ್ಕೆ ಹಣಕ್ಕಾಗಿ ಪೋಕರ್ ಆಡುವುದನ್ನು ಅಪರಾಧ ಎಂದು ಕಾನೂನಿನಲ್ಲಿ ಹೇಳಲಾಗಿದೆ. ಆದರೆ, ಪೋಕರ್ ತನ್ನ ರೂಪವನ್ನು ಬದಲಿಸಿಕೊಂಡಿದ್ದು, ಇದೀಗ ಪ್ರತಿಯೊಬ್ಬರ ಮನೆಯನ್ನೂ ಹಾಳು ಮಾಡುತ್ತಿದೆ. ಆನ್‌ಲೈನ್ ರಮ್ಮಿ ಹೆಸರಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ, ಅಧಿಕೃತವಾಗಿ ಮೊಬೈಲ್ ಫೋನ್‌ಗಳ ಮೂಲಕ ಬೆಟ್ಟಿಂಗ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರಲ್ಲಿ ಹಣ ಕಳೆದುಕೊಂಡವರು ಸಾಮಾನ್ಯ ಜನರು ಮಾತ್ರವಲ್ಲ, ಜನಪ್ರಿಯ ವ್ಯಕ್ತಿಗಳೇ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇತ್ತೀಚೆಗಷ್ಟೇ ಬ್ರೆಜಿಲ್ ಫುಟ್ಬಾಲ್ ತಾರೆ ನೇಮರ್ ಜೂನಿಯರ್ (Brazil Football Star Neymar Junior), ಆನ್‌ಲೈನ್ ಪೋಕರ್ ಆಟವಾಡಿ ಹಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಜೂನಿಯರ್ ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಆಡುತ್ತಿರುವ ನೈಮರ್ ಆನ್‌ಲೈನ್ನಲ್ಲಿ ಇಸ್ಪಿಟ್ ಆಡಿ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ. ಮೊಣಕಾಲಿನ ಗಾಯದಿಂದಾಗಿ ನೇಮರ್ ಪ್ರಸ್ತುತ ಫುಟ್‌ಬಾಲ್‌ನಿಂದ ಹೊರ ಗುಳಿದಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಬಿಡುವಿನ ವೇಳೆ ನೇಮರ್, ಆನ್‌ಲೈನ್ ಜೂಜು ಆಡಿದ್ದಾರೆ. ಪೋಕರ್ ಆಟವನ್ನು ಆಡಿದ ಒಂದೇ ಒಂದು ಗಂಟೆಯಲ್ಲಿ ವರದಿಗಳ ಪ್ರಕಾರ 8,80,000 ಪೌಂಡ್‌ಗಳನ್ನು ಕಳೆದುಕೊಂಡಿದ್ದಾರೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ 8 ಕೋಟಿ, 95 ಲಕ್ಷ 32 ಸಾವಿರ ರೂಪಾಯಿ. ಅಂದರೆ ಸುಮಾರು 9 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
The post ಆನ್‌ಲೈನ್ ಇಸ್ಪೀಟ್ ಆಡಿ, 9 ಕೋಟಿ ಕಳ್ಕೊಂಡು ಗಳಗಳನೇ ಅತ್ತ ಸ್ಟಾರ್ ಫುಟ್ಬಾಲ್ ಆಟಗಾರ! appeared first on ಕರುನಾಡ ನ್ಯೂಸ್.
[ad_2]
Source link