Advertisement

[ad_1]

ನೆಡುಂಬಶ್ಶೇರಿ: ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಕಸ್ಟಮ್ಸ್ ಅಧಿಕಾರಿಗಳು ಬಾಯಿ ಮತ್ತು ಜ್ಯೂಸ್ ಬಾಟಲ್‌ನಲ್ಲಿ ಅಕ್ರಮ ಚಿನ್ನಾಭರಣ ಸಾಗಿಸುತ್ತಿದ್ದವರನ್ನು ಬಂಧಿಸಿದ್ದಾರೆ. ಒಟ್ಟು ₹48 ಲಕ್ಷ ಮೌಲ್ಯದ 900 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಏರ್‌ಪೋರ್ಟ್‌ನಲ್ಲಿ ಕಸ್ಟಮ್‌ನ ಏರ್ ಇಂಟೆಲಿಜೆನ್ಸ್ ಯೂನಿಟ್‌ಗೆ ಬಂದ ನಿಖರ ಮಾಹಿತಿ ಆಧರಿಸಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬೈನಿಂದ ಬಂದ ಇಬ್ಬರು ಪ್ರಯಾಣಿಕರನ್ನು ಅಧಿಕಾರಿಗಳು ತಡೆದು ಪರೀಶೀಲಿಸಿದ್ದಾರೆ. ಈ ವೇಳೆ ಜ್ಯೂಸ್ ಬಾಟಲ್ ಮತ್ತು ಬಾಯಿಯಲ್ಲಿ ಬಚ್ಚಿಟ್ಟಿದ್ದ ತಲಾ 125.45 ಗ್ರಾಂ ತೂಕದ ಮೂರು ಚಿನ್ನದ ತುಂಡುಗಳು ಪತ್ತೆಯಾಗಿವೆ. ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಕಾಸರಗೋಡು ಮೂಲದ ಅಬೂಬಕರ್ ಮತ್ತು ಅಬ್ದುಲ್ಲಾ ಎಂಬುವವರನ್ನು ಕಸ್ಟಮ್ಸ್ ವಶಕ್ಕೆ ಪಡೆದಿದ್ದಾರೆ.



[ad_2]

Source link

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ