[ad_1]
ಕಿರುತೆರೆ ನಟ ವಿವಿಯನ್ ಡಿಸೇನಾ (Vivian Dsena) ಹಿಂದಿ ಧಾರಾವಾಹಿ ನೋಡುವವರ ಫೆವರೆಟ್ ಹೀರೊ. ಝಲಕ್ ದಿಖ್ಲಾ ಜಾ 8 ಮತ್ತು ಫಿಯರ್ ಫ್ಯಾಕ್ಟರ್ ಎಂಬ ರಿಯಾಲಿಟಿ ಷೋ ಗಳಲ್ಲಿ ಇವರು ಭಾಗವಹಿಸಿದ ಮೇಲಂತೂ ಫ್ಯಾನ್ಸ್ಗಳ ಹುಚ್ಚು ದುಪ್ಪಟ್ಟಾಗಿತ್ತು, ಈ ನಟನ ಖಾಸಗಿ ಜೀವನದ ಗುಟ್ಟೊಂದು ಇತ್ತೀಚೆಗೆ ರಿವೀಲ್ ಆಗಿತ್ತು. ವಿವಿಯನ್ ಡಿಸೇನಾ ಅಭಿಮಾನಿಗಳಿಗೆ ಡಬಲ್ ಶಾಕ್ ನೀಡಿದ್ದರು. ಇವರು ತಮ್ಮ ಈಜಿಪ್ಟ್ ಗೆಳತಿಯನ್ನು ಮದುವೆಯಾಗಿ ಒಂದು ವರ್ಷವಾಗಿದೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ವರದಿಯ ಪ್ರಕಾರ, ವಿವಿಯನ್ ಈಜಿಪ್ಟ್ ಪ್ರಜೆಯಾಗಿರುವ ತನ್ನ ದೀರ್ಘಕಾಲದ ಸಂಗಾತಿ ನೌರಾನ್ ಅಲಿಯನ್ನು ವಿವಾಹವಾಗಿದ್ದಾರಂತೆ, ಆದರೆ ಅದನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾರಿಗೂ ಗೊತ್ತಾಗದೆ ರಹಸ್ಯವಾಗಿಯೇ ಇಟ್ಟಿದ್ದಾರೆ. ತಾವು ಈಜಿಪ್ಟ್ನಲ್ಲಿಯೇ ನೌರನ್ (Nouran) ಎಂಬಾಕೆಯನ್ನು ವಿವಾಹವಾಗಿದ್ದು, ಮದುವೆಯಾಗಿ ಒಂದು ವರ್ಷವಾಗಿದೆ ಎಂದಿದ್ದರು. ಆದರೆ ಈ ಬಗ್ಗೆ ಹೆಚ್ಚಿಗೆ ಹೇಳಲು ಇಷ್ಟಪಡದಿದ್ದ ನಟ ಇದರ ಬಗ್ಗೆ ಏನಾದರೂ ಹೆಚ್ಚಿನ ಮಾಹಿತಿ ಬೇಕಿದ್ದರೆ ನನ್ನ ಅಸಿಸ್ಟೆಂಟ್ ಅವರನ್ನು ಕೇಳಿ ಎಂದು ಜಾಗ ಖಾಲಿ ಮಾಡಿದ್ದರು. ತನಗೆ ನಾಲ್ಕು ತಿಂಗಳ ಮಗು ಕೂಡ ಇದೆ ಎಂದು ತಿಳಿಸಿದರು. ಅದೇ ರೀತಿಯಾಗಿ ನಾನು ಸ್ವೀಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕಸಮ್ಹ್ ಸೇ ಮತ್ತು ಮಧುಬಾಲಾ – ಏಕ್ ಇಷ್ಕ್ ಏಕ್ ಜುನೂನ್‌ನಂತಹ ಕಾರ್ಯಕ್ರಮಗಳೊಂದಿಗೆ ಖ್ಯಾತಿ ಇರುವ ವಿವಿಯನ್, ಟಿವಿಗೆ ನೀಡಿರುವ ಸಂದರ್ಶನ ಒಂದರಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ತಾವು 2019 ರಿಂದ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವುದಾಗಿ ಹೇಳಿದ್ದಾರೆ. ನಾನು ನೆಮ್ಮದಿಯಿಂದ ಇದ್ದೇನೆ. ನಾನು 2019 ರ ಪವಿತ್ರ ತಿಂಗಳ ರಂಜಾನ್‌ನಲ್ಲಿ (Ramzaan) ಇಸ್ಲಾಂ ಧರ್ಮವನ್ನು ಅನುಸರಿಸಲು ಪ್ರಾರಂಭಿಸಿದ್ದು, ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವುದರಿಂದ ನಾನು ಸಾಕಷ್ಟು ಶಾಂತಿ ಮತ್ತು ಸಮಾಧಾನವನ್ನು ಕಂಡುಕೊಂಡಿದ್ದೇನೆ. ಹಾಗಾಗಿ ಇಲ್ಲಿ ನಾನು ಎಲ್ಲಾ ಅನಗತ್ಯ ಊಹಾಪೋಹಗಳಿಗೆ ವಿರಾಮ ಹಾಕುತ್ತೇನೆ’ ಎಂದಿದ್ದಾರೆ. ಈಗ ತಾವು ಅರೇಬಿಕ್ ಕಲಿಯುತ್ತಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ನಟ ಈ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್ನಲ್ಲಿ (Instagram) ‘ರಂಜಾನ್ ಆಚರಿಸುತ್ತಿದ್ದೇನೆ’ ಎಂದು ಹಂಚಿಕೊಂಡಿದ್ದರು.
[ad_2]
Source link