ದಿನಾಂಕ 31.10.2024 ಗುರುವಾರ ದಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ರವರು ಶ್ರೀಮತಿ ರಾಜೇಶ್ವರಿ ಕೆ ಕೆ ರವರ ಮನೆಗೆ ಭೇಟಿ ನೀಡಿದರು, ಇತ್ತೀಚಿಗೆ ನಡೆದ ರಸ್ತೆ ಅಪಘಾತದಲ್ಲಿ ಶ್ರೀಮತಿ ರಾಜೇಶ್ವರಿ ರವರ ಪತಿ ವಿದ್ಯಾಸಾಗರ್ ರವರು ತನ್ನ ಎಡಗಾಲು ಕಳೆದುಕೊಂಡಿರುತ್ತಾರೆ ಈ ನಿಟ್ಟಿನಲ್ಲಿ ಮಾನ್ಯ ಶಾಸಕರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು, ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ,

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್ ಕೆ ಎಂ, KPCC ಸದಸ್ಯರಾದ ರಮಾನಾಥ್ ಬೇಕಲ್, ಸಂಪಾಜೆ ವಲಯ ಅಧ್ಯಕ್ಷ ಸುರೇಶ್ ಪಿ.ಎಲ್, ನಿಕಟ ಪೂರ್ವ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹನೀಫ್ ಎಸ್ ಪಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೊಯಿದಿನ್ ಕುಂಞಿ ಬೂತ್ ಅಧ್ಯಕ್ಷರಾದ ರಿತಿನ್ ಡೆಮ್ಮಲೆ, ಕೆ ಎಂ ಮಾಧವ, NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುನೈಝ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಬಶೀರ್ ಚೆರಂಬಾಣೆ, ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.
