ಸುಳ್ಯ ಪೋಲೀಸ್ ಠಾಣೆಯಲ್ಲಿ ಪ.ಜಾತಿ/ಪಂಗಡದ ಕುಂದುಕೊರತೆ ಸಭೆಯು ದಲಿತ ಮುಖಂಡರಗಳ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮುಖಂಡರುಗಳು ತಮ್ಮ ಪ್ರಶ್ನೆಯನ್ನು ಆರಂಭಿಸಿ ಚಂದ್ರಶೇಖರ್ ಪಲ್ಲತ್ತಡ್ಕರವರು ಮೇನಾಲದ ಸ್ಮಶಾನ ಸಮಸ್ಯೆಯನ್ನು ಮಾತನಾಡಿ ತಾಲೂಕಿನಲ್ಲಿ ಹಲವು ಕಡೆ ದಲಿತರಿಗೆ ಸಂಬಂಧಪಟ್ಟ ಸ್ಮಶಾನವು ದಾಖಲೆಗಳ ಕೊರತೆಯಿಂದ್ದು ಹಾಗೂ ಅವ್ಯವಸ್ಥೆಯಿಂದ ಕೂಡಿದ್ದು ಹೆಣ ಸುಡುವ ಸಂದರ್ಭದಲ್ಲಿ ಸಮಸ್ಯೆಯ ಸಾಧ್ಯತೆಗಳು ನಿರ್ಮಾಣವಾಗಬಹುದು ಅದೇ ರೀತಿ ಪ.ಜಾತಿ,ಪಂಗಡದ ಸಮುದಾಯಗಳು ನಡೆಸುವ ಕ್ರೀಡಾ ಕೂಟಕ್ಕೆ ಮೈದಾನದ ಸಮಸ್ಯೆ ಎದುರಾಗಿದೆ ಎಂದು ಗಮನಕ್ಕೆ ತಂದರು. ಪ.ಜಾತಿ/ಪಂಗಡ ಸಮುದಾಯಗಳು ದಿನನಿತ್ಯ ಓಡಾಡುವ ದೊಡ್ಡೇರಿ ತೂಗು ಸೇತುವೆಯ ತಡೆ ಬೇಲಿಗಳು ತುಂಡಾಗಿ ಅಪಾಯಕ್ಕೆ ಆಹ್ವಾನದಂತೆ ನಿರ್ಮಾಣವಾಗಿದೆ ಕೂಡಲೇ ದುರಸ್ಥಿ ಪಡಿಸುವ ಕೆಲಸ ಆಗಬೇಕು ಹಾಗೂ ಪ.ಜಾತಿ/ಪಂಗಡದ ಕಾಲೋನಿಗಳಲ್ಲಿ, ಬಡವರಿಗೆ ಕೆಲ ಮೈಕ್ರೋ ಫೈನಾನ್ಸ್ ಹೆಸರಿನಿಂದ ಸಂಘ ರಚಿಸಿ ಸಾಲ ನೀಡಿ ವಸೂಲಿಯನ್ನು ಗುಂಪು ಕಟ್ಟಿಕೊಂಡು ಮನೆಗೆ ತೆರಳಿ ಗಂಟೆಗಟ್ಟಲೇ ಸಾಲಗಾರರ ಮನೆಯಲ್ಲಿ ಕೂರುವುದು,ಕರೆ ಮೂಲಕ ಮಾನಸಿಕ ಕಿರಿಕಿರಿ ಉಂಟು ಮಾಡುವುದು, ರೌಡಿಸಂ ರೀತಿ ಈ ವರ್ತನೆಗಳು ಮಾಡುತ್ತಿರುವುದು ಕಂಡು ಬರುತ್ತಿದೆ ಈ ಬಗ್ಗೆ ಇಲಾಖೆಯು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ಬೂಡುಮಕ್ಕಿರವರು ದೂರಿಕೊಂಡರು.ಮರ್ಕಂಜದಲ್ಲಿ ಬೀಟ್ ಪೋಲೀಸ್ ಕೊರತೆ ಹಾಗೂ ಕಲ್ಲುಗುಂಡಿ ಪಾರ್ಕಿಂಗ್ ಅವ್ಯವಸ್ಥೆಯ ಬಗ್ಗೆ ವಿಜಯ ಆರ್ಲಡ್ಕರವರು ಮಾತಾಡಿದರು.
ತಾಲೂಕು ಅಂಬೇಡ್ಕರ್ ಭವನ ನಿರ್ಮಾಣವು ಪೂರ್ಣಗೊಳ್ಳದೆ ವಿಳಂಬವಾಗುತ್ತಿರುವುದರ ಬಗ್ಗೆ ಗಣೇಶ್ ಮಾವಿನಪಳ್ಳರವರು ಸಭೆಯಲ್ಲಿ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದರು. ಠಾಣಾ ಉಪನಿರೀಕ್ಷರಾದ ಸಂತೋಷ್ ರವರು ಈ ಸಭೆಯಲ್ಲಿ ಕಂಡು ಬಂದ ದೂರುಗಳ ಬಗ್ಗೆ ಮಾಹಿತಿ ನೀಡಿ ಸಮಸ್ಯೆ ಇತ್ಯಾರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸುಂದರ್ ಪಟಾಜೆ,ಚೋಮ ಗಾಂಧಿನಗರ, ದೇವಕಿ ಕಾಟಿಪಳ್ಳ, ಸರಸ್ವತಿ ಬೊಳಿಯಮಜಲು, ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *