Advertisement

ಬೆಂಗಳೂರು: ಬೆಂಗಳೂರಿನ ‘ಕರ್ನಾಟಕ ಸ್ಟೇಟ್ ಫುಟ್ಬಾಲ್ ಅಸೋಸಿಯೇಷನ್’ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಡಿವಿಜನ್ ಫುಟ್ಬಾಲ್ ಅಸೋಸಿಯೇಷನ್ ‘ಎ’ ಡಿವಿಜನ್ ಫುಟ್ಬಾಲ್ ಪಂದ್ಯಾಕೂಟಕ್ಕೆ ತೆರೆ ಕಂಡಿದೆ.

ಸರಿಸುಮಾರು ಮೂರು ತಿಂಗಳ ಕಾಲ ನಡೆದ ಫುಟ್ಬಾಲ್ ಲೀಗ್ ಪಂದ್ಯಾಕೂಟದಲ್ಲಿ ಒಟ್ಟು ಹನ್ನೆರಡು ತಂಡಗಳು‌ ಸೆಣಸಾಡಿದ್ದವು. ಲೀಗ್ ಹಂತದ ಎಲ್ಲಾ ಪಂದ್ಯಾಟ ಸಮಾಪ್ತಿಗೊಳ್ಳುವಾಗ ಅಂಕಗಳ ಪಟ್ಟಿಯಲ್ಲಿ ಸೌತ್ ಯುನೈಟೆಡ್ ಎಫ್.ಸಿ ಹಾಗೂ ಹೆಚ್.ಎ.ಎಲ್ ( ಹಿಂದೂಸ್ತಾನ್ ಏರೋನೆಟಿಕ್ ಲಿಮಿಟೆಡ್) ತಂಡಗಳು ತಲಾ 31-31 ಅಂಕಗಳಿಂದ ಸಮಬಲ ಸಾಧಿಸಿದ್ದವು, ಸಮಬಲ ಅಂಕಗಳಿದ್ದ ಕಾರಣ, ತಂಡಗಳು ಸಂಪಾದಿಸಿದ ಗೋಲುಗಳ ಆಧಾರದ ಮೂಲಕ, ಸೌತ್ ಯುನೈಟೆಡ್ ಎಫ್.ಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ,

ಹೆಚ್.ಎ.ಎಲ್ ತಂಡ ರನ್ನರ್ ಅಪ್ ಪಡೆದುಕೊಂಡು, ಮುಂದೆ ನಡೆಯಲಿರುವ ಸೂಪರ್ ಡಿವಿಜನ್ ಪಂದ್ಯಾಕೂಟಕ್ಕೆ ಅರ್ಹತೆ ಪಡೆಯಿತು. ಪ್ರತಿಷ್ಟಿತ ಈ ಪಂದ್ಯಾಟದಲ್ಲಿ ಹೆಚ್.ಎ.ಎಲ್ ಪರ ಸುಳ್ಯದ ಯುವ ಫುಟ್ಬಾಲ್ ಆಟಗಾರ ಅನ್ವರ್ ಶ್ರೇಷ್ಠ ಮಟ್ಟದ ಪ್ರದರ್ಶನ ತೋರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ