ಗ್ರಾಮೀಣ ಪ್ರದೇಶದಲ್ಲಿ ಆಂಬುಲೆನ್ಸ್ ಸೇವೆ, ರಕ್ತದಾನ ಶಿಬಿರ, ಯೋಗ ತರಬೇತಿ ಕೇಂದ್ರ ಹೀಗೆ ಹಲವಾರು ಸೇವಾ ಚಟುವಟಿಕೆ ನಡೆಸುತ್ತಿರುವ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂದು ಮಹತ್ವದ ಅಗ್ನಿ ರಕ್ಷಕ ಸೇವೆ ಲೋಕಾರ್ಪಣೆಯನ್ನು ಶ್ರೀ ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನ ಇದರ ಅಧ್ಯಕ್ಷರು ಆದ ಬೆಳಿಯಪ್ಪ ಗೌಡ ಕಡ್ತಲಕಜೆ, ಗುತ್ತಿಗಾರು ಪಿ. ಎ. ಸಿ. ಬ್ಯಾಂಕ್ ಮಾಜಿ ಅಧ್ಯಕ್ಷರು ಆದ ಭರತ್ ಮುಂಡೋಡಿ,ಅರಣ್ಯ ಇಲಾಖೆ ಸಿಬ್ಬಂದಿಗಳದ ಧನಂಜಯ ಕುಕ್ಕುಡೆಲು , ಕಾರ್ತಿಕ್ ದೇವ, ಗುತ್ತಿಗಾರು ಚರ್ಚ್ ಧರ್ಮ ಗುರು ಆದರ್ಶ ಪುದಿತಿಯೇತ್, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಉಪಾಧ್ಯಕ್ಷ ಮೋಹನ್ ದಾಸ್ ಶಿರಾಜೆ, ಪ್ರಧಾನ ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ, ನಿವೃತ್ತ ಸೈನಿಕ ಮಹೇಶ್ ಕೊಪ್ಪತಡ್ಕ ಮತ್ತು ಸರ್ವ ಸದಸ್ಯರು ಯೋಗ ಶಿಬಿರದಲ್ಲಿ ಭಾಗವಸಿದ ಪೋಶಕರು ಪುಟಾಣಿಗಳ ಸಮ್ಮುಖದಲ್ಲಿ ಪ್ರಾತ್ಯಕ್ಷತೆ ನೀಡುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಒಂದು ವಾರಗಳ ಸಮಯ ನಡೆದ ಯೋಗ ತರಬೇತಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಮೆಡಲ್ ಗಳನ್ನು ವಿತರಣೆ ಮಾಡಲಾಯಿತು. ಮತ್ತು ರಾಷ್ಟ್ರಿಯ ಯೋಗಪಟುಗಳಾದ ತನ್ವಿ ತಂಟೆಪ್ಪಾಡಿ, ಸಾನ್ವಿ ಪಂಜ ಇವರನ್ನು ಸನ್ಮಾನಿಸಲಾಯಿತು.ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಮತ್ತು ರಾಷ್ಟ್ರಿಯ ಯೋಗ ಪಟುಗಳಿಂದ ಯೋಗ ಪ್ರದರ್ಶನ ನಡೆಯಿತು. ಹನಿಕ್ಷಾ. ಯಸ್.ಆರ್. ಮತ್ತು ಹವೀಕ್ಷ. ಯಸ್. ಆರ್. ಪ್ರಾರ್ಥನೆ ನೆರವೇರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ಸೇರಿದಂತೆ ತುರ್ತು ಅಗ್ನಿ ದುರಂತಗಳಾದ ಸಂದರ್ಭದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಫೈರ್ ಕಿಟ್ಟ್ ಗಳನ್ನು ಖರೀದಿಸಿ ಇದರ ಉಪಯೋಗದ ತರಬೇತಿ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ ಸಹಕಾರಕ್ಕಾಗಿ ಸಂಪರ್ಕ ಮಾಡಿದಲ್ಲಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಿಟ್ಟ್ ಮೂಲಕ ಬೆಂಕಿ ನಂದಿಸುವ ವಿನೂತನ ಯೋಜನೆ ಇದಾಗಿದೆ ಎಂದು ಅಧ್ಯಕ್ಷ ಚಂದ್ರಶೇಖರ ಕಡೋಡಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ